ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಹೆಡ್‌ಮಾಸ್ಟರ್ ಖಡಕ್ ಆಗಿದ್ದರೆ, ಮೂಗ ಮಗು ಕೂಡ 29ರ ಮಗ್ಗಿ ಹೇಳುತ್ತದೆ"

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಖಡಕ್ ಆಡಳಿತ ಮತ್ತು ಭಿನ್ನ ಶೈಲಿಯ ಕಾರ್ಯವೈಖರಿ ಸದಾ ಸುದ್ದಿಯಲ್ಲಿರುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಯೋಗಿ ಆದಿತ್ಯನಾಥ್ ಅವರ ಹಳೆಯ ವಿಡಿಯೋವೊಂದು ಮತ್ತೆ ಮುನ್ನೆಲೆಗೆ ಬಂದಿದ್ದು, ಭಾರೀ ವೈರಲ್ ಆಗುತ್ತಿದೆ. ಶಾಲೆಯೊಂದಕ್ಕೆ ದಿಢೀರ್ ಭೇಟಿ ನೀಡಿದ ಸಿಎಂ, ಅಲ್ಲಿನ ಮುಸ್ಲಿಂ ಶಿಕ್ಷಕರೊಬ್ಬರ ಬಳಿ ಶ್ಲೋಕ ಹೇಳಿಸಿರುವ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ.

ಸಾಮಾಜಿಕ ಜಾಲತಾಣವಾದ 'X' (ಟ್ವಿಟರ್) ನಲ್ಲಿ HasnaZarooriHai ಎಂಬ ಖಾತೆಯಿಂದ ಹಂಚಿಕೊಳ್ಳಲಾದ ಈ ವಿಡಿಯೋಗೆ, "ಹೆಡ್‌ಮಾಸ್ಟರ್ ಖಡಕ್ ಆಗಿದ್ದರೆ, ಮೂಗ ಮಗು ಕೂಡ 29ರ ಮಗ್ಗಿ ಹೇಳುತ್ತದೆ" ಎಂದು ಹಾಸ್ಯಭರಿತ ಶೀರ್ಷಿಕೆ ನೀಡಲಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶಾಲೆಯೊಂದರ ತರಗತಿ ಕೋಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುತ್ತಾರೆ. ಈ ವೇಳೆ ಅಲ್ಲಿನ ಮುಸ್ಲಿಂ ಶಿಕ್ಷಕರೊಬ್ಬರನ್ನು ಮಾತನಾಡಿಸುವ ಸಿಎಂ, ಅವರಿಗೆ "ಗುರುಬ್ರಹ್ಮ ಗುರುವಿಷ್ಣು..." ಶ್ಲೋಕ ಬರುತ್ತದೆಯೇ ಎಂದು ಕೇಳುತ್ತಾರೆ. ಮೊದಲಿಗೆ ಕೊಂಚ ತಡಬಡಾಯಿಸುವ ಶಿಕ್ಷಕರು, ಮುಖ್ಯಮಂತ್ರಿಗಳ ಖಡಕ್ ಉಪಸ್ಥಿತಿಯಲ್ಲಿ ಕೈಮುಗಿದು ಶ್ಲೋಕವನ್ನು ಪಠಿಸಲು ಆರಂಭಿಸುತ್ತಾರೆ. ಶಿಕ್ಷಕರು ಶ್ಲೋಕವನ್ನು ಪೂರ್ತಿಯಾಗಿ ಹೇಳಿ ಮುಗಿಸುತ್ತಿದ್ದಂತೆ ಸಿಎಂ ಯೋಗಿ ಆದಿತ್ಯನಾಥ್ ಅವರು ಮುಗುಳ್ನಕ್ಕು, ಶಿಕ್ಷಕರ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾರೆ.

Edited By : Nirmala Aralikatti
PublicNext

PublicNext

26/05/2026 02:28 pm

Cinque Terre

18.36 K

Cinque Terre

3

ಸಂಬಂಧಿತ ಸುದ್ದಿ