ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಮ್ಮ ನಿರ್ಧಾರ ಕನ್ನಡಿಗರ ಹಿತದೃಷ್ಟಿಗಾಗಿ ಇರುತ್ತೆ - ಸುರ್ಜೇವಾಲಾ ಮಹತ್ವದ ಹೇಳಿಕೆ!

ಬೆಂಗಳೂರು: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.

"ಕೆ.ಸಿ. ವೇಣುಗೋಪಾಲ್ ಅವರು ನಿನ್ನೆ ತಿಳಿಸಿದಂತೆ, ಕಾಂಗ್ರೆಸ್ ಪಕ್ಷವು ಇಲ್ಲಿಯವರೆಗೆ ಶಾಸಕಾಂಗ ಪಕ್ಷದ ಯಾವುದೇ ಸಭೆಯನ್ನು ಕರೆದಿಲ್ಲ. ಅಲ್ಲದೆ, ಮುಖ್ಯಮಂತ್ರಿ ಆಯ್ಕೆ ಅಥವಾ ಇತರೆ ಯಾವುದೇ ವಿಷಯದ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ಅಂತಿಮಗೊಳಿಸಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪರಿಸ್ಥಿತಿಗಳು ಸ್ಪಷ್ಟವಾದಂತೆ, ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಹೇಳಿದ ಸುರ್ಜೇವಾಲಾ, "ಕರ್ನಾಟಕದ ಪ್ರತಿಯೊಬ್ಬರಿಗೂ, ಪ್ರತಿಯೊಬ್ಬ ಕನ್ನಡಿಗನಿಗೂ ನಾನು ಭರವಸೆ ನೀಡಲು ಬಯಸುವುದೇನೆಂದರೆ, ನಾವು ಕೈಗೊಳ್ಳುವ ಏಕೈಕ ನಿರ್ಧಾರ ಕರ್ನಾಟಕದ ಜನರ ಹಿತದೃಷ್ಟಿಯಿಂದಾಗಿರುತ್ತದೆ" ಎಂದು ಘೋಷಿಸಿದ್ದಾರೆ.

Edited By : Vijay Kumar
PublicNext

PublicNext

27/05/2026 10:02 pm

Cinque Terre

4.96 K

Cinque Terre

1

ಸಂಬಂಧಿತ ಸುದ್ದಿ