ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ನಾಳೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದು ಖಚಿತವಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಮೇ.28ರಂದೇ ಅವರು ರಾಜೀನಾಮೆ ಕೊಡಬೇಕಾಗಿ ಬಂದಿದ್ದು, ಅದಕ್ಕಾಗಿ ಕಾಂಗ್ರೆಸ್ ನ ಆಂತರಿಕ ವಲಯದಲ್ಲಿ ಎಲ್ಲ ಸಿದ್ಧತೆಗಳು ಗೌಪ್ಯವಾಗಿಯೇ ಸಾಗಿವೆ.
ಈ ಮಾತಿಗೆ ಪುಷ್ಟಿ ಎಂಬಂತೆ ಸಿಎಂ ಸಿದ್ದರಾಮಯ್ಯ ಅವರು ನಾಳೆ ಗವರ್ನರ್ ಅವರ ಭೇಟಿಗಾಗಿ ಸಮಯಾವಕಾಶವನ್ನು ಕೇಳಿದ್ದು, ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರು ಭೇಟಿಗೆ ಅವಕಾಶ ನೀಡಿದ್ದಾರೆಂಬ ಮಾಹಿತಿ ದೊರೆತಿದೆ.
ಇದಕ್ಕೂ ಮುನ್ನ ಸಿಎಂ ನಿವಾಸ ಕಾವೇರಿ ನಿವಾಸದಲ್ಲಿ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಉಪಹಾರ ಕೂಟವನ್ನು ಏರ್ಪಡಿಸಿದ್ದು, ಆಗ ಎಲ್ಲರೊಂದಿಗೆ ಉಭಯ ಕುಶಲೋಪರಿ ಹಂಚಿಕೊಂಡು ತಾವು ರಾಜೀನಾಮೆ ಕೊಡುತ್ತಿರೋದನ್ನು ಬಹಿರಂಗಪಡಿಸಲಿದ್ದಾರೆಂದು ಕಾಂಗ್ರೆಸ್ ನ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಈ ವೇಳೆ ದೆಹಲಿಯಿಂದ ಆಗಮಿಸಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೂ ಸಿಎಂ ಅವರ ಉಪಹಾರ ಕೂಟಕ್ಕೆ ಹಾಜರಾಗಲಿದ್ದಾರೆಂದು ಹೇಳಲಾಗುತ್ತೆ. ಅದಾದ ಬಳಿಕ ನೇರವಾಗಿ ರಾಜಭವನಕ್ಕೆ ತೆರಳುವ ಸಿಎಂ ಗವರ್ನರ್ ಥಾವರಚಂದ ಗೆಹ್ಲೋಟ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿ ವಾಪಸ್ಸಾಗಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
PublicNext
27/05/2026 10:12 pm
LOADING...