ಬೆಂಗಳೂರು : ಇನ್ನೇನು ಡಿಕೆಶಿಗೆ ಸಿಎಂ ಪಟ್ಟ ಸಿಗೋದು ಗ್ಯಾರಂಟಿ ಅಂತಾ ತಿಳಿಯುತ್ತಿದ್ದಂತೆಯೇ ಇತ್ತ ಒಕ್ಕಲಿಗರಲ್ಲಿ ಹರ್ಷ ಮೂಡಿದಂತಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಕೆಂಚಪ್ಪಗೌಡ ಅವರು, ಕಾಂಗ್ರೆಸ್ ಪಕ್ಷಕ್ಕೆ ಒಕ್ಕಲಿಗರ ಸಮುದಾಯ ಮತ ಹಾಕಿದ್ದರಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ.
ಹೀಗಾಗಿ ನಮ್ಮ ಸಮುದಾಯದ 'ಡಿಕೆ' ಅವರು ಸಿಎಂ ಆಗಲು ಸಮರ್ಥರಿದ್ದು, ಕಾಂಗ್ರೆಸ್ ಅವರಿಗೆ ಅವಕಾಶ ಮಾಡಿಕೊಡುತ್ತಿದೆ ಎಂದರು. ಒಂದೊಮ್ಮೆ ಡಿಕೆಶಿಗೆ ಅನ್ಯಾಯವಾದ್ರೆ ಸೂಕ್ತ ತೀರ್ಮಾನ ಮಾಡಲಾಗುತ್ತೆ
ಈ ಹಿಂದೆಯೂ ನಾವು ಡಿಕೆಶಿ ಸಿಎಂ ಆಗಬೇಕು ಅಂತ ಒತ್ತಾಯ ಮಾಡಿದ್ವಿ ಮತ್ತು ಹೋರಾಟವನ್ನು ನಡೆಸಿದ್ವಿ. ಈಗಲೂ ಅನ್ಯಾಯವಾದ್ರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡ್ತೀವಿ ಎಂದು ಅವರು ಎಚ್ಚರಿಕೆ ನೀಡಿದರು. ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್ ಅವರು, ಮೇ.ತಿಂಗಳ 31 ರಂದು ಬೆಂಗಳೂರಿನ ಅರಮನೆ ಮೈದಾನದ ಆವರಣದಲ್ಲಿ ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ವಿವಿಧ ಪದಾಧಿಕಾರಿಗಳಾದ ಶ್ರೀಧರ್, ಪುಟ್ಟಸ್ವಾಮಿ, ನಲ್ಲಿಗೆರೆ ಬಾಲು, ಗಂಗಾಧರ್, ಪ್ರಕಾಶ್, ರೇಣುಕಾಸ್ವಾಮಿ, ದೇವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
PublicNext
27/05/2026 08:16 pm
LOADING...