ಅಧಿಕಾರ ಹಸ್ತಾಂತರದ ಕುರಿತು ನಿನ್ನೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಆರು ಗಂಟೆಗಳ ಕಾಲ ಕಾಂಗ್ರೆಸ್ ವರಿಷ್ಠರೊಂದಿಗಿನ ಮ್ಯಾರಥಾನ್ ಸಭೆಯ ಬಳಿಕ ಬೆಂಗಳೂರಿಗೆ ಆಗಮಿಸಿದ ಸಿಎಂ ಇಂದು ವಿಧಾನಸೌಧಕ್ಕೆ ಆಗಮಿಸಿದರು. ಬೆಳಗ್ಗೆ ಪಂ.ಜವಾಹರಲಾಲ್ ನೆಹರು ಅವರ ಪುಣ್ಯ ತಿಥಿ ಕಾರ್ಯಕ್ರಮದ ಬಳಿಕ ವಿಧಾನಸೌಧದ ಮುಖ್ಯದ್ವಾರದ ಮೂಲಕ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಸಿಎಂ ಅವರ ಮುಖದಲ್ಲಿ ಶೂನ್ಯ ಭಾವ ಆವರಿಸಿದಂತೆ ಕಂಡು ಬಂತು. ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದಕ್ಕೆ ಇದೀಗ ಕೌಂಟ್ ಡೌನ್ ಶುರುವಾದಂತಾಗಿದೆ.
PublicNext
27/05/2026 07:53 pm
LOADING...