ಮೂಡಲಗಿ: ವಿವಿಧ ಕಡೆಗಳಲ್ಲಿ ಕಳೆದುಹೋಗಿದ್ದ ಸುಮಾರು 15 ಮೊಬೈಲ್ ಗಳನ್ನು ಟ್ರೇಸ್ ಮಾಡಿ ಮೂಡಲಗಿ ಪೊಲೀಸರ ವತಿಯಿಂದ ಮಾಲೀಕರಿಗೆ ಒಪ್ಪಿಸಲಾಯಿತು.
ಮೂಡಲಗಿ ಪಟ್ಟಣದ ಸಿಪಿಐ ಕಚೇರಿಯಲ್ಲಿ CEIR (Central Equipment Identity Register) portal ವತಿಯಿಂದ ಕಳೆದುಕೊಳ್ಳಲಾಗಿದ್ದ ಮೊಬೈಲ್ ಗಳನ್ನು ಟ್ರೇಸ್ ಮಾಡಲಾಗಿದ್ದು ಸಿಕ್ಕ ಮೊಬೈಲ್ ಗಳನ್ನು ಅವುಗಳ ಮಾಲೀಕರಿಗೆ ಒಪ್ಪಿಸಲಾಯಿತು.
ಈ ಸಂದರ್ಭದಲ್ಲಿ ಸಿಪಿಐ ಶ್ರೀಶೈಲ ಬ್ಯಾಕೂಡ, ಪಿಎಸ್ಐ ರಾಜು ಪೂಜೇರಿ, ಪ್ರೊಬೇಶನರಿ ಪಿಎಸ್ಐ ರಾಜು ಪಿ. ಪೂಜಾರ, ಸಿಬ್ಬಂದಿಗಳಾದ ಎಸ್ ಜಿ ಮಣ್ಣಾಪೂರ, ಎಲ್ ಎಸ್ ಜೊಕ್ಕಾನಟ್ಟಿ, ಕೆ ಸಿ ಬಾಗಲಿ ಹಾಗೂ ಲಕ್ಷ್ಮಣ ಗುಡೇರ ಉಪಸ್ಥಿತರಿದ್ದರು.
PublicNext
27/05/2026 06:45 pm
LOADING...