ಕೋಲಾರ: ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ, ರೌಡಿ ಮುಕ್ತ ಕೆಜಿಎಫ್ ಕಾರ್ಯಾಚರಣೆ ಮುಂದುವರೆದಿದೆ.
ಕೆಜಿಎಫ್ ನ ಆಂಡ್ರಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಗಳಾಗಿರೊ 20 ವರ್ಷದ ಅಭಿಸಿರಿಲ್ ಹಾಗು 54 ವರ್ಷದ ಆಂಥೋನಿ ಎಂಬ ಇಬ್ಬರು ರೌಡಿಶೀಟರ್ ಗಳನ್ನ, ಕೆಜಿಎಫ್ ತಾಲೂಕಿನಿಂದ ಯಾದಗಿರಿ ಹಾಗು ಬಾಗಲಕೋಟೆ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ.
ರೌಡಿಶೀಟರ್ ಅಭಿಸಿರಿಲ್ ಈಗಾಗಲೇ 1 ಕೊಲೆ ಹಾಗು 5 ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದು, ಒಟ್ಟು 11 ಕೇಸ್ ನಲ್ಲಿ ಆರೋಪಿಯಾಗಿದ್ದಾನೆ. ಇನ್ನು ರೌಡಿಶೀಟರ್ ಆಂಥೋನಿ 3 ಕೊಲೆಯತ್ನ ಸೇರಿ 11 ಕೇಸ್ ನಲ್ಲಿ ಆರೋಪಿಯಾಗಿದ್ದಾನೆ. ಆರೋಪಿಗಳು ಜಾಮೀನು ಮೇಲಿದ್ದರು, ಮತ್ತೆ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗ್ತಿರೊ ಹಿನ್ನೆಲೆ ಗಡಿಪಾರು ಮಾಡಲಾಗಿದೆ ಎಂದು ಆಂಡ್ರಸನ್ ಪೇಟೆ ಪೊಲೀಸರು ಮಾಹಿತಿ ನೀಡಿದ್ದಾರೆ.
PublicNext
04/06/2026 10:59 am
LOADING...