ವಿರಾಜಪೇಟೆ: ಕೊಡಗು ಜಿಲ್ಲೆಗೆ ಸಚಿವ ಸ್ಥಾನ ವಿಚಾರ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.
ವಿರಾಜಪೇಟೆಯ ಕೆದಮುಳ್ಳೂರಿಗೆ ಆಗಮಿಸಿದ ಶಾಸಕ ಸಚಿವ ಸಂಪುಟದಲ್ಲಿ ಕೊಡಗಿಗೆ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎ.ಎಸ್. ಪೊನ್ನಣ್ಣ, ಅದೆಲ್ಲವನ್ನೂ ಸಿಎಂ, ಮಾಜಿ ಸಿಎಂ, ಪಕ್ಷದ ಹೈಕಾಮಾಂಡ್ ನಿರ್ಧಾರ ಮಾಡುತ್ತದೆ. ಮುಂದೆ ಏನಾಗುತ್ತೆ ಕಾದುನೋಡೋಣ. ಈಗ ಪಕ್ಷದ ಆಧಾರಸ್ತಂಭವಾಗಿದ್ದವರಿಗೆ ಹಿರಿಯರಿಗೆ ನೀಡಲಾಗಿದೆ. ಜಿಲ್ಲೆಗೆ ಸಚಿವ ಸ್ಥಾನ ಕೊಡಬೇಕೆಂಬುದು ಪಕ್ಷದ ನಾಯಕರ ಗಮನದಲ್ಲಿದೆ. ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ, ಕಾದುನೋಡುವ ಎಂದು ಪೊನ್ನಣ್ಣ ತಿಳಿಸಿದ್ದಾರೆ.
PublicNext
06/06/2026 07:27 am
LOADING...