ಮಡಿಕೇರಿ: ಸಚಿವ ರಾಮಲಿಂಗರೆಡ್ಡಿ ರಾಜೀನಾಮೆ ಗಂಭೀರ ವಿಚಾರ ಇದು ಆಪತ್ತಿನ ಮುನ್ಸೂಚನೆ ಎಂಬ ಹೆಚ್.ಕೆ.ಪಾಟೀಲ್ ಹೇಳಿಕೆಗೆ ಮಡಿಕೇರಿಯಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ರಾಜೀನಾಮೆ ವಿಚಾರವಾಗಿ ಗಮನ ಹರಿಸಬೇಕು ಎಂಬುದು ಸರಿ ಇದೆ. ಆದ್ರೆ ಯಾರು ಆ ಕಡೆ ಗಮನ ಹರಿಸಬೇಕಾದವರು ಗಮನ ಹರಿಸುತ್ತಾರೆ ಅದಕ್ಕೆ ಅಂತಾನೆ ಸಿಎಂ,ಮಾಜಿ ಸಿಎಂ,ಹೈಕಮಾಂಡ್ ಇದೆ ನಾವು ಗಮನ ಹರಿಸಬೇಕಾದ ಅವಶ್ಯಕತೆ ಇಲ್ಲ.ನಾವು ಆಡಳಿತದ ಕಡೆ ಗಮನ ಹರಿಸಬೇಕಿದೆ.ಸರಕಾರದ ಪ್ರಾರಂಭದಲ್ಲಿ ಇಂತಹ ತೊಡಕು ಇರುತ್ತದೆ ಆದರೆ ಉತ್ತಮ ಆಡಳಿತದ ಬಗ್ಗೆ ಎಲ್ಲಾ ಗಮನ ಕೊಡಬೇಕು ಇದು ಪಕ್ಷದ ಆಂತರಿಕ ವಿಚಾರ ಎಂದು ಹೇಳಿದರು.
PublicNext
07/06/2026 07:42 am
LOADING...