ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿರಾಜಪೇಟೆ: ಎಐ ಆಡಿಯೋ ಅಂತ ಜಮೀರ್ ಹೇಳಿದ್ದಾರೆ - ಶಾಸಕ ಪೊನ್ನಣ್ಣ

ವಿರಾಜಪೇಟೆ: ಮಾಜಿ ಸಚಿವ ಜಮೀರ್ ಅಹಮದ್ ಆಡಿಯೋ ಅದು ಎಐ ವಿಡಿಯೋ ಎಂದು ಜಮೀರ್ ಅವರೇ ಹೇಳಿದ್ದಾರೆ ತನಿಖೆಯಾಗಲೆಂದು ವಿರಾಜಪೇಟೆಯಲ್ಲಿ ಶಾಸಕ ಎ.ಎಸ್ ಪೊನ್ನಣ್ಣ ಹೇಳಿದ್ದಾರೆ.

ವಿರಾಜಪೇಟೆಯ ಕೆದಮುಳ್ಳೂರಿಗೆ ಆಗಮಿಸಿದ ಶಾಸಕ ಪೊನ್ನಣ್ಣ ಜಮೀರ್ ಆಡಿಯೋ ಲೀಕ್ ನಿಂದ ಸಚಿವ ಸ್ಥಾನ ತಪ್ಪಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು ಜಮೀರ್ ಅವರೇ ಇದು ಎಐ ಆಡಿಯೋ ಅಂತ ಹೇಳಿದ್ದಾರೆ. ತಂತ್ರಜ್ಞಾನ ಯುಗದಲ್ಲಿ ಇದೀಗ ಸಾಕಷ್ಟು ಬೆಳವಣಿಗೆಗಳು ಆಗುತ್ತಿದ್ದು ಯಾವುದನ್ನ ಕೂಡ ಬದಲಾವಣೆ ಮಾಡಬಹುದು ಹಾಗಾಗಿ ಯಾರ ಆಡಿಯೋ ಬೇಕಾದರೂ ಎಐ ಯಲ್ಲಿ ಮಾಡಬಹುದು ಹಾಗಾಗಿ ಅದರ ಬಗ್ಗೆ ತನಿಖೆ ನಡೆಯುತ್ತಿದೆ ತನಿಖೆಯ ಬಳಿಕ ಎಲ್ಲಾ ಸತ್ಯಾಸತ್ಯತೆ ಹೊರ ಬೀಳಲಿದೆ. ಜಮೀರ್ ಅವರೇ ಅದು ನನ್ನ ವಾಯ್ಸ್ ಅಲ್ಲ ಅಂದಿದ್ದಾರೆ ಎಂದು ಶಾಸಕ ಪೊನ್ನಣ್ಣ ಜಮೀರ್ ಪರವಾಗಿ ಬ್ಯಾಟ್ ಬೀಸಿದ್ದಾರೆ

Edited By : PublicNext Desk
PublicNext

PublicNext

06/06/2026 07:39 am

Cinque Terre

6.22 K

Cinque Terre

0

ಸಂಬಂಧಿತ ಸುದ್ದಿ