ಮಡಿಕೇರಿ: ಸಚಿವ ರಾಮಲಿಂಗಾರೆಡ್ಡಿ ಸಚಿವಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಕಾಂಗ್ರೆಸ್ ವಿಧಾನಸಭೆಯನ್ನು ವಿಸರ್ಜನೆ ಮಾಡಿ ಚುನಾವಣೆಗೆ ಹೋಗಲಿ ಎಂಬ ವಿಜಯೇಂದ್ರ ಹೇಳಿಕೆ ಮಡಿಕೇರಿಯಲ್ಲಿ ಶಾಸಕ ಎ.ಎಸ್ ಪೊನ್ನಣ್ಣ ಕಿಡಿಕಾರಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಬಿಜೆಪಿ ಸರಕಾರದ ಅವಧಿ ಇದ್ದಾಗ ಎಷ್ಟು ಬಾರಿ ವಿಸರ್ಜನೆ ಮಾಡಬೇಕಿತ್ತು. ದೇಶದಲ್ಲಿನ ಪರಿಸ್ಥಿತಿ ಹೇಗಿದೆ ಪಾರ್ಲಿಮೆಂಟ್ ವಿಸರ್ಜನೆ ಮಾಡ್ತಾರಾ? ಪಾರ್ಲಿಮೆಂಟ್ ವಿಸರ್ಜನೆ ಮಾಡಿದ್ರೆ ನಾವು ವಿಧಾನಸಭೆ ವಿಸರ್ಜನೆ ಮಾಡ್ತೇವೆ ಎಲ್ಲರೂ ಚುನಾವಣೆಗೆ ಹೋಗೋಣ ನೋಡೋಣ ಎಂದು ವಿಜಯೇಂದ್ರಗೆ ಮಾತಿನಲ್ಲೇ ಟಾಂಗ್ ಕೊಟ್ಟಿದ್ದಾರೆ.
ವಿಜಯೇಂದ್ರರ ಈ ತರ ಮಾತಲ್ಲಿ ಯಾವುದೇ ಅರ್ಥ ಇಲ್ಲ. ಜನ ಐದು ವರ್ಷಕ್ಕೆ ಆಡಳಿತ ಮಾಡಿ ಎಂದು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸಣ್ಣಪುಟ್ಟ ಗೊಂದಲಗಳು ಇರುತ್ತವೆ. ಬಿಜೆಪಿಯಲ್ಲಿ ಸದ್ಯ ನಾಲ್ಕು ಗುಂಪು ಇದೆ ಅದನ್ನು ಮೊದಲು ಸರಿಪಡಿಸಲಿ ಜವಾಬ್ದಾರಿಯುತ ವಿರೋಧ ಪಕ್ಷವನ್ನು ಸ್ವಾಗತ ಮಾಡುತ್ತೇವೆ. ಆದರೆ ಅದನ್ನೇ ಬಂಡವಾಳ ಮಾಡಿ ಸರಕಾರಕ್ಕೆ ತೊಂದರೆ ಮಾಡಬಾರದು ಸರಕಾರ ದಾರಿ ತಪ್ಪಿದಾಗ ತಿದ್ದುವಂತಹ ಕೆಲಸ ಮಾಡಲಿ ಅದನ್ನು ಹೊರತು ಪಡಿಸಿ ಈ ರೀತಿ ಮಾಡೋದು ಸರಿಯಲ್ಲ ಎಂದು ಶಾಸಕ ಎ.ಎಸ್ ಪೊನ್ನಣ್ಣ ಹೇಳಿದ್ದಾರೆ.
PublicNext
07/06/2026 07:35 am
LOADING...