ನಂಜನಗೂಡು: ದೇವಿರಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಎರಡು ಅರಳಿ ಮರಗಳ ರೆಂಬೆ ಕೊಂಬೆಗಳು ಮಕ್ಕಳ ಮೇಲೆ ಯಾವಾಗ ಬೇಕಾದರೂ ಬೀಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಜೀವ ಭಯದಲ್ಲಿ ಪುಟಾಣಿ ಮಕ್ಕಳು ಪಾಠ ಪ್ರವಚನ ಕೇಳುತ್ತಿದ್ದರು.
ಪಬ್ಲಿಕ್ ನೆಕ್ಸ್ಟ್ ಸುದ್ದಿ ವಾಹಿನಿ ಸ್ಥಳಕ್ಕೆ ಭೇಟಿ ನೀಡಿ, ರೆಂಬೆ ಕೊಂಬೆಗಳನ್ನು ಕಟಾವು ಮಾಡುವಂತೆ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರ ಮಾಡಿದ 24 ಗಂಟೆಯೊಳಗೆ ಎಚ್ಚೆತ್ತ ದೇವಿರಮ್ಮನಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಕ್ರೇನ್ ಮೂಲಕ ಎರಡೂ ಅರಳಿ ಮರಗಳ ರೆಂಬೆ ಕೊಂಬೆಗಳನ್ನು ಕಟಾವು ಮಾಡಿ ತೆರವುಗೊಳಿಸಿದ್ದಾರೆ.
ಇದು ಪಬ್ಲಿಕ್ ನೆಕ್ಸ್ಟ್ ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ. ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ, ಕೂಸಿನ ಮನೆ ಕಟ್ಟಡಗಳ ಮಧ್ಯ ಭಾಗದಲ್ಲಿ ಎರಡು ಅರಳಿ ಮರಗಳ ರೆಂಬೆ ಕೊಂಬೆಗಳು ಒಣಗಿ ಬೀಳುವ ಸಂಭವವಿತ್ತು. ಶಾಲೆಗೆ ಬರುವ ಮಕ್ಕಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬರುತ್ತಿದ್ದರು.
ಅಲ್ಲದೆ ಗ್ರಾಮಸ್ಥರು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರು. ಮಳೆಗಾಲ ಸಂದರ್ಭ ವಾಗಿರುವುದರಿಂದ ಬಿರುಗಾಳಿ ಮಳೆಗೆ ಯಾವಾಗ ಬೇಕಾದರೂ ಮರಗಳ ರೆಂಬೆ ಕೊಂಬೆಗಳು ಬೀಳುವ ಸಂಭವ ಎದುರಾಗಿತ್ತು. ಮರಗಳ ರೆಂಬೆ ಕೊಂಬೆಗಳನ್ನು ತೆರವು ಮಾಡುವಂತೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ. ಅಪಾಯಕ್ಕೆ ಆಹ್ವಾನಿಸುತ್ತಿರುವ ರೆಂಬೆ ಕೊಂಬೆಗಳನ್ನು ತೆರವು ಮಾಡುವಂತೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸುದ್ದಿ ವಾಹಿನಿಯಲ್ಲಿ ವರದಿ ಪ್ರಕಟಿಸಿದ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡು ತೆರವುಗೊಳಿಸಿದ್ದಾರೆ. ಇದು ಪಬ್ಲಿಕ್ ನೆಕ್ಸ್ಟ್ ವರದಿಯ ಫಲಶ್ರುತಿಯಾಗಿದೆ.
ಸಿ.ಎಂ ಸುಗಂಧರಾಜು ಪಬ್ಲಿಕ್ ನೆಕ್ಸ್ಟ್ ಮೈಸೂರು
PublicNext
08/06/2026 08:01 am
LOADING...