ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ದೇಶದ ಯಾವುದೇ ಪಿನ್ ಕೋಡ್ ಹುಡುಕುವುದು ಇನ್ನು ಸುಲಭ - ಅಂಚೆ ಇಲಾಖೆಯಿಂದ ಜನಸ್ನೇಹಿ ಹೆಜ್ಜೆ

ಚಿಕ್ಕಮಗಳೂರು : ಅಂಚೆ ವಿಭಾಗವು ಸಾರ್ವಜನಿಕರಲ್ಲಿ ಪಿನ್ ಕೋಡ್ ಕುರಿತು ಅರಿವು ಮೂಡಿಸುವ ಸಲುವಾಗಿ ಅತ್ಯಂತ ಉಪಯುಕ್ತವಾದ ವಿಶೇಷ ಅಭಿಯಾನವೊಂದನ್ನು ಹಮ್ಮಿಕೊಂಡಿದೆ. ಭಾರತದಲ್ಲಿ 1972ರಲ್ಲಿ ಆರಂಭವಾಗಿ ಅರ್ಧ ಶತಮಾನಕ್ಕೂ ಮೀರಿದ ಇತಿಹಾಸ ಹೊಂದಿರುವ ಪಿನ್ ಕೋಡ್ ವ್ಯವಸ್ಥೆಯು ಪತ್ರಗಳು ಮತ್ತು ಪಾರ್ಸೆಲ್‌ಗಳನ್ನು ನಿಖರವಾಗಿ ಹಾಗೂ ವೇಗವಾಗಿ ತಲುಪಿಸಲು ಅತ್ಯಗತ್ಯವಾಗಿದೆ.

ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಅಂಚೆ ಕಚೇರಿಗಳ ಪಿನ್ ಕೋಡ್ ವಿವರಗಳನ್ನು ಒಳಗೊಂಡ "ಅಕ್ಷರಾನುಕ್ರಮಣಿಕೆಯ ಪಿನ್ ಕೋಡ್ ಡೈರೆಕ್ಟರಿ" ಯನ್ನು ವಿಭಾಗವು ಸಿದ್ಧಪಡಿಸಿದೆ. ಈ ಡೈರೆಕ್ಟರಿಯಲ್ಲಿ ಜಿಲ್ಲೆಯ ಮಾಹಿತಿಯಷ್ಟೇ ಅಲ್ಲದೆ, ದೇಶದ ಯಾವುದೇ ಮೂಲೆಯ ಪಿನ್ ಕೋಡ್ ಅನ್ನು ಸುಲಭವಾಗಿ ಹುಡುಕುವ ವಿಧಾನವನ್ನೂ ವಿವರಿಸಲಾಗಿದೆ.ನಾಗರಿಕ ಕೇಂದ್ರಿತ ಸೇವಾ ಕಾರ್ಯಕ್ರಮದ ಅಂಗವಾಗಿ ಈ ಪಿನ್ ಕೋಡ್ ಡೈರೆಕ್ಟರಿಯ ಉಚಿತ ಪ್ರತಿಗಳನ್ನು ಮುಂದಿನ ಒಂದು ತಿಂಗಳ ಒಳಗಾಗಿ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಗಳಿಗೆ ವಿತರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ವಿಶೇಷ ಯೋಜನೆಯ ಮೊದಲ ಪ್ರತಿಯನ್ನು ಚಿಕ್ಕಮಗಳೂರು ಅಂಚೆ ವಿಭಾಗದ ಅಧೀಕ್ಷಕರಾದ ಶ್ರೀ ಶ್ರೀನಾಥ ಎನ್. ಬಿ. ಅವರು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಕೀರ್ತನಾ ಹೆಚ್. ಎಸ್. ಅವರಿಗೆ ಅಧಿಕೃತವಾಗಿ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯದರ್ಶಿ ಗೌರವ ಶೆಟ್ಟಿ ಹಾಗೂ ಪ್ರಸರಣ ಕಾರ್ಯನಿರ್ವಾಹಕ ಅಧಿಕಾರಿ ದೊಡ್ಡೇಶ್ ಅವರು ಉಪಸ್ಥಿತರಿದ್ದರು.ಸರಿಯಾದ ಪಿನ್ ಕೋಡ್ ಬಳಕೆಯಿಂದ ಅಂಚೆ ಸೇವೆಯ ಗುಣಮಟ್ಟ ಮತ್ತು ವೇಗವನ್ನು ಮತ್ತಷ್ಟು ಹೆಚ್ಚಿಸಬಹುದಾಗಿದ್ದು, ಅಂಚೆ ಇಲಾಖೆಯನ್ನು ಜನಸ್ನೇಹಿಯಾಗಿಸಲು ಇಂತಹ ಹತ್ತಾರು ಜನೋಪಯೋಗಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಈ ಪಿನ್ ಕೋಡ್ ಡೈರೆಕ್ಟರಿಯ ಪಿ.ಡಿ.ಎಫ್. ಪ್ರತಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಆಸಕ್ತರು ಚಿಕ್ಕಮಗಳೂರು ವಿಭಾಗದ ವಾಟ್ಸಾಪ್ ಸಂಖ್ಯೆ 9448291068 ಅಥವಾ ಇಮೇಲ್ ಐಡಿ dochikmagalur.ka@indiapost.gov.in ಗೆ "SEND PINCODE DIRECTORY" ಎಂದು ಸಂದೇಶ ಕಳುಹಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

Edited By : PublicNext Desk
PublicNext

PublicNext

10/06/2026 12:55 pm

Cinque Terre

4.1 K

Cinque Terre

0

ಸಂಬಂಧಿತ ಸುದ್ದಿ