ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಿದೆ. ಈ ವಿಶೇಷ ರೈಲುಗಳು (TOD) ಜೂನ್ 20, 2026 ಮತ್ತು ಜೂನ್ 21, 2026 ರಂದು (ಶನಿವಾರ ಮತ್ತು ಭಾನುವಾರ) ಕಾರ್ಯಾಚರಣೆ ನಡೆಸಲಿವೆ. ರೈಲು ಸಂಖ್ಯೆ 07341 ಹುಬ್ಬಳ್ಳಿಯಿಂದ (UBL) ಮುಂಜಾನೆ 05.00 ಗಂಟೆಗೆ ಹೊರಟು, ಅದೇ ದಿನ ಬೆಳಗ್ಗೆ 11.15 ಕ್ಕೆ ಚಿಕ್ಕಮಗಳೂರನ್ನು (CMGR) ತಲುಪಲಿದೆ.
ಮರುಪ್ರಯಾಣದಲ್ಲಿ ರೈಲು ಸಂಖ್ಯೆ 07342 ಚಿಕ್ಕಮಗಳೂರಿನಿಂದ ಸಂಜೆ 17.30 ಕ್ಕೆ ಹೊರಟು, ರಾತ್ರಿ 23.20 ಕ್ಕೆ ಹುಬ್ಬಳ್ಳಿಯನ್ನು ತಲುಪಲಿದೆ. ಈ ವಿಶೇಷ ರೈಲುಗಳು ಎರಡೂ ದಿಕ್ಕಿನಲ್ಲಿ ತಲಾ 2 ಟ್ರಿಪ್‌ಗಳಂತೆ ಸಂಚರಿಸಲಿವೆ. ಪ್ರಯಾಣದ ಮಧ್ಯೆ ಈ ರೈಲುಗಳು ಪ್ರಮುಖವಾಗಿ ಹಾವೇರಿ (HVR), ರಾಣೇಬೆನ್ನೂರು (RNR), ಹರಿಹರ (HRR), ದಾವಣಗೆರೆ (DVG), ಚಿಕ್ಕಜಾಜೂರು (JRU), ಕಡೂರು (DRU) ಮತ್ತು ಬೀರೂರು (BLHI) ನಿಲ್ದಾಣಗಳಲ್ಲಿ ನಿಲ್ಲಲಿವೆ. ಈ ರೈಲು ಒಟ್ಟು 10 ಬೋಗಿಗಳನ್ನು ಹೊಂದಿರಲಿದ್ದು, ಇದರಲ್ಲಿ ಒಂದು ಸ್ಲೀಪರ್ (GSCN), ಏಳು ಸಾಮಾನ್ಯ (GS) ಮತ್ತು ಎರಡು ಎಸ್‌ಎಲ್‌ಆರ್ (SLR) ಬೋಗಿಗಳು ಒಳಗೊಂಡಿರುತ್ತವೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ಸೇವೆಯನ್ನು ಕಲ್ಪಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/06/2026 12:07 pm
LOADING...