ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‌ಕುಂದಗೋಳ : 20 ವರ್ಷದ ಶಾಪಕ್ಕೆ ಮುಕ್ತಿ ಯಾವಾಗ ? ಮೌನೇಶ್ವರ ಪ್ಲಾಟ್ ವನವಾಸ

ಕುಂದಗೋಳ : ಎಷ್ಟೋ ಜನ ಶಾಸಕರು ಬದಲಾದರೂ, ಎಷ್ಟೋ ಜನ ಅಧಿಕಾರಿಗಳು ಬದಲಾದರೂ, ಮೌನೇಶ್ವರ ಪ್ಲಾಟ್ ನಿವಾಸಿಗಳ‌ ಅಭದ್ರತೆಯ ಗುಡಿಸಲು, ಅವ್ಯವಸ್ಥೆ ಹಾಗೇ‌ ಉಳಿದಿದೆ.

ಹೌದು ! ಹೀಗೆ ಇಂದೋ ನಾಳೆ ಬೀಳುವ ಹಂತದಲ್ಲಿನ ಸಾಲು ಸಾಲು ಜೋಪಡಿ, ಗುಡಿಸಲಲ್ಲಿ ವಾಸಿಸುತ್ತಿರುವ ಕುಂದಗೋಳ ಪಟ್ಟಣದ ಮೌನೇಶ್ವರ ಪ್ಲಾಟ್ ನಿವಾಸಿಗಳಿಗೆ ಇಂದಿಗೂ ತಮ್ಮ ವಾಸದ ಜಾಗದ ಹಕ್ಕು ಪತ್ರ ಸಿಕ್ಕಿಲ್ಲ.

ಈ ದುರಾದೃಷ್ಟದ ಕಾರಣ ಕಳೆದ 20ಕ್ಕೂ ಅಧಿಕ ವರ್ಷಗಳಿಂದ ಸ್ವಂತ ಮನೆ ಕಟ್ಟಲಾಗದೆ, ಸೊಳ್ಳೆ, ರೋಗ-ರುಜಿನ ತುಂಬಿದ ಕಲುಷಿತಗೊಂಡ ವಾತಾವರಣದಲ್ಲೇ ವಾಸಿಸುತ್ತಾ ಬಡವರು ಏನಂದ್ರು ಕೇಳಿ..

ಕುಂದಗೋಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮೌನೇಶ್ವರ ಪ್ಲಾಟ್ ನಿವಾಸಿಗಳ‌ ಮನೆಗೆ ವಿದ್ಯುತ್, ನೀರು ಸೌಲಭ್ಯ ಇದೆ, ಆದರೆ ಜಾಗದ ಹಕ್ಕು ಪತ್ರ ಸಿಕ್ಕೇ ಇಲ್ಲ, ಈ ಕಾರಣ ಮಳೆ, ಬಿಸಿಲು, ಚಳಿ ಯಾವ ಕಾಲ ಬಂದರೂ ಇವರ ಬದುಕು ಹೀಗೆ ಬೀದಿಯಲ್ಲಿದೆ.

ಈ ಹಿಂದೆ ಆಶ್ರಯ ಸಮಿತಿ ಸಭೆ ನಡೆದು ಹಕ್ಕು ಪತ್ರ ನೀಡಬೇಕು ಎಂಬ ಚರ್ಚೆ ನಡೆದರೂ ಅದು ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ, ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿ ಸ್ನೇಹಲ್, ಆರ್ ಅವರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ

Edited By : Somashekar
Kshetra Samachara

Kshetra Samachara

15/06/2026 02:36 pm

Cinque Terre

3.4 K

Cinque Terre

0

ಸಂಬಂಧಿತ ಸುದ್ದಿ