ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಕೇಶ್ವಾಪೂರದಲ್ಲಿ ಒಳಚರಂಡಿ ಒಡೆದು ಅವ್ಯವಸ್ಥೆ - ಪಾಲಿಕೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದೆ. ಸಾರ್ವಜನಿಕರ ಸಮಸ್ಯೆ ಕಂಡರೂ, ಕಾಣದಂತೆ ನಡೆದುಕೊಳ್ಳುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಕಳೆದ ಸುಮಾರು ಐದು ದಿನಗಳಿಂದ ಒಳಚರಂಡಿ ಒಡೆದು, ನೀರು ಹರಿಯುತ್ತಿದೆ. ಹೀಗಿದ್ದರೂ ಯಾರೊಬ್ಬರೂ ಕಾಳಜಿ ವಹಿಸದೇ ಇರುವುದು ನಿಜಕ್ಕೂ ಅವ್ಯವಸ್ಥೆಗೆ ಸಾಕ್ಷಿಯಾಗಿದೆ.

ಈ ಬಗ್ಗೆ ಸಾಕಷ್ಟು ಬಾರಿ ಇಲ್ಲಿನ ಜನರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಒಟ್ಟಿನಲ್ಲಿ ಪಾಲಿಕೆಯು ಜನರಿಗೆ ಗುಣಮಟ್ಟದ ಸೇವೆ ಹಾಗೂ ಪರಿಸರ ಒದಗಿಸುವಲ್ಲಿ ವಿಫಲವಾಗಿದೆಯಾ..? ಎಂಬುವಂತ ಅನುಮಾನ ದಟ್ಟವಾಗಿದ್ದು, ಇನ್ನಾದರೂ ಈ ಬಗ್ಗೆ ಕಾಳಜಿ ವಹಿಸಬೇಕಿದೆ.

Edited By : Manjunath H D
Kshetra Samachara

Kshetra Samachara

15/06/2026 03:15 pm

Cinque Terre

1.45 K

Cinque Terre

0

ಸಂಬಂಧಿತ ಸುದ್ದಿ