ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾದಚಾರಿಗಳಿಗೆ ತಪ್ಪದ ಸಂಕಷ್ಟ: ರಸ್ತೆಗಿಳಿದು ನಡೆಯುವ ಅನಿವಾರ್ಯತೆ, ಅಪಘಾತ ಭೀತಿ!

ಹುಬ್ಬಳ್ಳಿ: ಮಹಾನಗರ ಪಾಲಿಕೆ ಅಧಿಕಾರಿಗಳು ಫುಟ್‌ಪಾತ್ ಅತಿಕ್ರಮಣ ಕಾರ್ಯಾಚರಣೆಯನ್ನು ಕೇವಲ ಕಾಟಾಚಾರಕ್ಕೆ ಮಾಡಿದ್ರೊ ಗೊತ್ತಿಲ್ಲ. ಆದರೆ ಹುಬ್ಬಳ್ಳಿಯ ಮಧುರ ಕಾಲೋನಿಯಲ್ಲಿ ಕೆಲವು ಹೋಟೆಲ್‌ಗಳು ಹಾಗೂ ವ್ಯಾಪಾರಸ್ಥರು ಮತ್ತೆ ಫುಟ್‌ಪಾತ್‌ಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಯಾರದೇ ಭಯವಿಲ್ಲದೆ ರಾಜಾರೋಷವಾಗಿ ವ್ಯಾಪಾರ ಮಾಡುತ್ತಿದ್ದಾರೆ.

ಹೌದು,,, ಫುಟ್‌ಪಾತ್ ಮೇಲೆ ಅಂಗಡಿಗಳನ್ನು ತೆರವುಗೊಳಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಹಿಂದೆ ಖಡಕ್ ಎಚ್ಚರಿಕೆ ನೀಡಿದ್ದರೂ ಕೂಡ ಈಗ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕುಸಗಲ್ ರೋಡ್ ಮಧುರ ಕಾಲೋನಿಯಲ್ಲಿ ಹೋಟೆಲ್ ಆದಿತ್ಯ ಹಾಗೂ ಇತರ ಹೋಟೆಲ್ ಮುಂದೆ ಫುಟ್‌ಪಾತ್ ಮೇಲೆ ರಾಜಾರೋಷವಾಗಿ ವಸ್ತುಗಳನ್ನು ಇಟ್ಟು ವ್ಯಾಪಾರ ನಡೆಸಲಾಗುತ್ತಿದೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ಸಾರ್ವಜನಿಕರಲ್ಲಿ ಇದರಿಂದ ಅಪಘಾತಗಳ ಭೀತಿಯೂ ಹೆಚ್ಚಾಗಿದೆ. ಕೂಡಲೇ ಮಹಾನಗರ ಪಾಲಿಕೆ ಅಧಿಕಾರಿಗಳುತಕ್ಷಣವೇ ಫುಟ್‌ಪಾತ್ ಮೇಲಿರುವ ಎಲ್ಲಾ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/06/2026 04:14 pm

Cinque Terre

9.23 K

Cinque Terre

0

ಸಂಬಂಧಿತ ಸುದ್ದಿ