ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸನಾದಿ ಅಪ್ಪಣ್ಣ ವೃತ್ತದ ಬಳಿ ನಡೆಯುತ್ತಿರುವ ಚರಂಡಿ ನಿರ್ವಹಣೆ ಕಾಮಗಾರಿ ಸದ್ಯ ಮತ್ತಷ್ಟೂ ಅಪಾಯದ ಮುನ್ಸೂಚನೆಗೆ ಕಾರಣವಾಗಿದೆ.
ಹೌದು ! ಹುಬ್ಬಳ್ಳಿ ಸನಾದಿ ಅಪ್ಪಣ್ಣ ವೃತ್ತದ ಬಳಿ ಬೃಹತ್ ತಗ್ಗು ಬಿದ್ದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಸಾರ ಮಾಡಿತ್ತು, ಆ ವರದಿ ಬಳಿಕ ಚರಂಡಿ ಕಾಮಗಾರಿ ನಿರ್ವಹಣೆ ನಡೆದಿದ್ದು, ಕಾಮಗಾರಿ ಸ್ಥಳದಲ್ಲಿ ತಗ್ಗು ತೋಡಿ ಯಾವುದೇ ಮುನ್ಸೂಚನೆ ಫಲಕ, ಕಾಮಗಾರಿ ಅಕ್ಕಪಕ್ಕದಲ್ಲಿ ಸುರಕ್ಷತಾ ಕ್ರಮ ಅನುಸರಿಸದೇ ಕೈ ಬಿಡಲಾಗಿದೆ. ಈ ಪರಿಣಾಮ ನಾಲ್ಕು ರಸ್ತೆ ಸೇರುವ ನಿತ್ಯ ಸಾವಿರಾರು ವಾಹನ ಸಂಚರಿಸುವ ಸನಾದಿ ಅಪ್ಪಣ್ಣ ವೃತ್ತದ ಬಳಿ ವಾಹನ ಸವಾರರಿಗೆ ಯಾವಾಗ ? ಯಾವ ಅನಾಹುತ ಸಂಭವಿಸುತ್ತೋ ತಿಳಿಯದಾಗಿದೆ.
ಸದ್ಯ ಈ ಬೃಹತ್ ಚರಂಡಿ ನಿರ್ವಹಣೆ ಕಾಮಗಾರಿ ಬಳಿ ವಾಹನ ಸವಾರರಿಗೆ ಎಚ್ಚರಿಕೆ ಫಲಕ, ತಗ್ಗು ತೋಡಿರುವ ಜಾಗದ ಸುತ್ತ ಭದ್ರತೆ, ರಾತ್ರಿ ವೇಳೆ ಕಾಮಗಾರಿ ಸ್ಥಳದಲ್ಲಿ ರಿಫ್ಲೆಕ್ಟರ್ ಇಲ್ಲದೆ ಇರುವುದು ಅಪಾಯಕ್ಕೆ ಆಹ್ವಾನವಾಗಿದೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
15/06/2026 03:36 pm
LOADING...