ಧಾರವಾಡ: ಧಾರವಾಡದ ಕೆಲಗೇರಿ ಹಿಂಭಾಗದಲ್ಲಿರುವ ಚಾಲುಕ್ಯನಗರಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ಅಲ್ಲಿನ ಜನ ಅಧಿಕಾರಿಗಳಿಗೆ ವಿನಂತಿಸಿದ್ದರೂ ಅಧಿಕಾರಿಗಳು ಮಾತ್ರ ಬಸ್ ಸೌಕರ್ಯ ನೀಡಿರಲಿಲ್ಲ.
ಇದೇ ವಿಷಯವನ್ನು ಚಾಲುಕ್ಯನಗರದ ನಿವಾಸಿಗಳು ಕಾಂಗ್ರೆಸ್‌ನ ಹಿರಿಯ ಮುಖಂಡ ದೀಪಕ ಚಿಂಚೋರೆ ಅವರಿಗೆ ತಿಳಿಸಿದಾಗ ಚಿಂಚೋರೆ ಅವರು ವಾಯವ್ಯ ಸಾರಿಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಚಾಲುಕ್ಯನಗರಕ್ಕೆ ಬಸ್ ವ್ಯವಸ್ಥೆ ಮಾಡಿಸಿದ್ದಾರೆ.
ಈ ಬಸ್ ವ್ಯವಸ್ಥೆ ಆದ ಮೇಲೆ ಶಾಸಕ ಅರವಿಂದ ಬೆಲ್ಲದ ಅವರು ಆ ಬಸ್ ತಾವೇ ಉದ್ಘಾಟಿಸುವುದಾಗಿ ಹೇಳಿದ್ದರಂತೆ. ಅಧಿಕಾರಿಗಳು ಆ ಬಸ್‌ಗೆ ಆತ್ಮಶ್ರೀ ನಗರದ ಬಸ್ ಎಂದು ಬೋರ್ಡ್ ಕೂಡ ಹಾಕಿಸಿದ್ದರು. ಆದರೆ, ದೀಪಕ ಚಿಂಚೋರೆ ಅವರು ಸೋಮವಾರ ಆ ಬಸ್‌ಗೆ ತಾವೇ ಚಾಲನೆ ನೀಡಿ ಅದರಲ್ಲಿ ಚಾಲುಕ್ಯನಗರದವರೆಗೂ ಪ್ರಯಾಣ ಮಾಡಿ ಆ ಬಸ್‌ಗೆ ಚಾಲುಕ್ಯನಗರದ ಬಸ್ ಎಂದೇ ಬೋರ್ಡ್ ಹಾಕಿಸಿದ್ದಾರೆ.
ಚಿಂಚೋರೆ ಅವರ ಈ ಕಾರ್ಯಕ್ಕೆ ಚಾಲುಕ್ಯನಗರ ನಿವಾಸಿಗಳು ಧನ್ಯವಾದ ಸಲ್ಲಿಸಿದ್ದಾರೆ.
Kshetra Samachara
15/06/2026 02:48 pm
LOADING...