ಹುಬ್ಬಳ್ಳಿ : ಇದು ಹವಾಮಾನ ವೈಪರಿತ್ಯವೋ.. ಅನ್ನದಾತನ ಮೇಲೆ ದೇವರ ಮುನಿಸೋ.. ಗೊತ್ತಿಲ್ಲ ! ಮಳೆ ಅಭಾವದ ಕಾರಣ ರೈತಾಪಿ ಬೆಳೆಗಳು ವಿಲ ವಿಲ ಎನ್ನುವ ಪರಿಸ್ಥಿತಿ ಇನ್ನೇನು ದೂರ ಉಳಿದಿಲ್ಲ.
ಹೌದು ! ಮುಂಗಾರು ಬಿತ್ತನೆ ಆರಂಭದ ಮೊದಲೇ ರಾಜ್ಯಾದ್ಯಂತ ಎಲ್ ನಿನೋ ಎಫೆಕ್ಟ್ ಪರಿಣಾಮ ಮಳೆ ಅಭಾವ ಆಗುತ್ತೆ ಎಂಬ ಮಾಹಿತಿ ಎಲ್ಲೇಡೆ ಹರಿದಾಡಿತ್ತು.
ಇದೀಗ ಮಳೆಯ ಅಭಾವ ಅಕ್ಷರಶಃ ರೈತಾಪಿ ಬೆಳೆಗಳಿಗೆ ಕಂಟಕವಾಗಿ ಪರಿಣಮಿಸಿದ್ದು ಜೂನ್ ತಿಂಗಳಾದರೂ ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿ ಶೇ.65% ಪ್ರತಿಶತ ಬಿತ್ತನೆಯಾಗಿ ಬಾಕಿ ಬಿತ್ತನೆಗೆ ರೈತ ವಲಯದಲ್ಲಿ ಮಳೆ ಕೊರತೆ ಕಾಡುತ್ತಲಿದೆ.
ಇದಲ್ಲದೆ ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿ 2026-27 ಸಾಲಿನಲ್ಲಿ 44.404 ಹೆಕ್ಟೇರ್ ಭೂಮಿ ಬಿತ್ತನೆ ಗುರಿ ಹೊಂದಿದ್ದು ಜೂನ್.12ರ ಸಹಾಯಕ ಕೃಷಿ ನಿರ್ದೇಶಕರು ಕಚೇರಿ ವರದಿಯಂತೆ 28.250 ಹೆಕ್ಟೇರ್ ಭೂಮಿ ಬಿತ್ತನೆ ಆಗಿದೆ.
ಬಿತ್ತನೆಯಾದ ಬೆಳೆದ ಬೆಳೆಗಳಿಗೆ ಮಳೆಯ ಅಭಾವದ ಕಾರಣ ಭೂಮಿಯಲ್ಲಿ ತೇವಾಂಶ, ಭೂಮಿಯ ಮೇಲ್ಮೈ ಒಣಹವೆಯಿಂದ ಬೆಳೆಗಳು ಅಳಿವು ಉಳಿವಿನ ಪ್ರಶ್ನೆ ಕಾಡಿದೆ.
ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿ ಶೇ.65% ಬಿತ್ತನೆ ಪ್ರದೇಶದಲ್ಲಿ 7550 ಹೆಕ್ಟೇರ್ ಮೆಕ್ಕೆಜೋಳ, 8085 ಹೆಕ್ಟೇರ್, ಸೋಯಾಬಿನ್, 1750 ಹೆಕ್ಟೇರ್ ಶೇಂಗಾ, 17.250 ಹೆಕ್ಟೇರ್ ಹೆಸರು, 340 ಹೆಕ್ಟೇರ್ ಉದ್ದು, 450 ಹೆಕ್ಟೇರ್ ಕಬ್ಬು ಬೆಳೆಯಲಾಗಿದೆ.
ಒಟ್ಟಾರೆ ಹುಬ್ಬಳ್ಳಿ ಸಹಾಯಕ ಕೃಷಿ ನಿರ್ದೇಶಕರು ಕಚೇರಿ ವ್ಯಾಪ್ತಿಯಲ್ಲಿ ರೈತಾಪಿ ಜನರಿಗೆ ಕೃಷಿ ಅಧಿಕಾರಿಗಳು ಭೇಟಿ ಕೊಟ್ಟು ಬೆಳೆ ಪರಿಶೀಲನೆ ನಡೆಸಿದ್ದು ವರುಣದೇವ ಕಣ್ತೆರೆದರೆ ಮಾತ್ರ ಬೆಳೆಗಳ ಉಳಿವು........
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
15/06/2026 06:21 pm
LOADING...