ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂನ್ 17 ರಂದು ಧಾರವಾಡ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ - ಹೆಸ್ಕಾಂ ಪ್ರಕಟಣೆ

ಧಾರವಾಡ: ಧಾರವಾಡ 110 ಕೆ.ವಿ ಕೆ.ಯು.ಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜೂನ್ 17 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು 1ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಜೂನ್ 17 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಧಾರವಾಡದ ನೆಹರು ನಗರ, ಬಸವ ನಗರ, ಹೊಯ್ಸಳ ನಗರ, ಕಲ್ಯಾಣ ನಗರ, ವಿಜಯಾನಂದ ನಗರ, ಶ್ರೀ ನಗರ, ಮಹಾಂತ ನಗರ, ಮಂಜುನಾಥ ಕಾಲೋನಿ, ಕೆಲಗೇರಿ ರೋಡ್, ಶಿವಶಕ್ತಿ ನಗರ, ಶಾಂತಿನಿಕೇತನ ನಗರ, ಪ್ರಶಾಂತ್ ನಗರ, ಸಾಧನಕೇರಿ, ಸಾಯಿ ನಗರ, ರೆವಿನ್ಯೂ ಕಾಲೋನಿ, ಚೈತನ್ಯ ನಗರ, ಚನ್ನಬಸವೇಶ್ವರ ನಗರ, ವಿನಾಯಕ ನಗರ, ಶಿವಗಿರಿ, ಪಾವಟೆ ನಗರ, ಮಾಳಮಡ್ಡಿ, ಸರೋವರ ನಗರ, ಲೋಟಸ್ ಪಾರ್ಕ್, ಬನಶಂಕರಿ ನಗರ, ಕುಸುಮ ನಗರ, ಸಪ್ತಾಪುರ, ಕೆ.ಸಿ.ಡಿ, ಜಯನಗರ, ಪಾವಟೆನಗರ, ನವೋದಯ ನಗರ, ಧಾರವಾಡ ತಾಲೂಕಿನ ಸಲಕಿನಕೊಪ್ಪ, ಮುಗದ, ಬಸವೇಶ್ವರ, ರಾಮಾಪುರ, ಕ್ಯಾರಕೊಪ್ಪ, ಹುಲಕಟ್ಟಿ, ಮುಗದ, ಕಲ್ಲಾಪುರ, ಓಸ್ವಾಲ್, ದಡ್ಡಿ ಕಮಲಾಪುರ, ರಾಮಾಪುರ, ವೀರಾಪುರ, ನಿರ್ಮಲ ನಗರ, ಜಾಂಬವಂತ ನಗರ, ಕೇಶವ ನಗರ, ಕೆಲಗೇರಿ, ಆಂಜನೇಯ ನಗರ, ಗಾಯತ್ರಿಪುರಂ, ಸರೋವರ ನಗರ, ಆದಿತ್ಯ ಪಾರ್ಕ್, ಅಶೋಕ ನಗರ, ಪವನ ಪಾರ್ಕ್, ಸಂಪಿಗೆ ನಗರ, ಶಾಂಭವಿ ನಗರ, ಕೆ.ಐ.ಏ.ಡಿ.ಬಿ ಲೇಔಟ್, ತಪೋವನ ನಗರ, ಆತ್ಮಾನಂದ ಲೇಔಟ್, ಗಣೇಶ ನಗರ, ಹನುಮಂತ ನಗರ, ನಿಸರ್ಗ ಲೇಔಟ್, ಅತ್ತಿಕೊಳ್ಳ, ದಾನವ ನಗರ, ಯಲಿಗಾರ ಲೇಔಟ್, ಕಲ್ಯಾಣ ನಗರ ಕ್ರಾಸ್, ಮಹಾಮನೆ ಬಡಾವಣೆ, ಮಿಚಿಗನ್ ಲೇಔಟ್, ಉದಯ ಸರ್ಕಲ್, ಯುಬಿ ಹಿಲ್, ಕೆಸಿಡಿ-ಜುಬ್ಲಿ ಸರ್ಕಲ್ ರೋಡ್, ಸಪ್ತಾಪುರ ಭಾವಿ, ಭಾರತಿ ನಗರ, ಮಿಚಿಗನ್ ಕಂಪೌಂಡ್, ರಾಧಾಕೃಷ್ಣ ನಗರ, ಜಲದರ್ಶಿನಿ ನಗರ, ರಾಣಿ ಚೆನ್ನಮ್ಮ ನಗರ, ಕೃಷಿ ನಗರ, ಶ್ರೀಪಾದ ನಗರ, ಐಶ್ವರ್ಯ ಲೇಔಟ್, ಭಾವಿಕಟ್ಟಿ ಪ್ಲಾಟ್, ಕೆಲಗೇರಿ ರೋಡ್, ಮಂಜುನಾಥ ಕಾಲೋನಿ ಮತ್ತು ಕೋರ್ಟ್ ಸರ್ಕಲ್, ಜುಬ್ಲಿ ಸರ್ಕಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Edited By : Nagaraj Tulugeri
Kshetra Samachara

Kshetra Samachara

15/06/2026 07:06 pm

Cinque Terre

6.3 K

Cinque Terre

0

ಸಂಬಂಧಿತ ಸುದ್ದಿ