ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಚೆಯ್ಯಂಡಾಣೆಯಲ್ಲಿ ಗಾಳಿ ಮಳೆಗೆ ಕುಸಿದು ಬಿದ್ದ ಮನೆಯ ತಡೆಗೋಡೆ

ನಾಪೋಕ್ಲು: ಕೊಡಗು ಜಿಲ್ಲೆ ನಾಪೋಕ್ಲು ಸಮೀಪದ ಚೆಯ್ಯಂಡಾಣೆಯಲ್ಲಿ ಸುರಿದ ಗಾಳಿ ಮಳೆಗೆ ಚೆಯ್ಯಂಡಾಣೆ ಪಟ್ಟಣದ ಹೃದಯ ಭಾಗದಲ್ಲಿರುವ ಮನೆಯ ಬೃಹತ್ ತಡೆಗೋಡೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ.

ಬಿ.ಆರ್. ಸುರೇಶ್ ಎಂಬುವರ ಮನೆಯ ಬೃಹತ್ ತಡೆಗೋಡೆ ಗಾಳಿ ಮಳೆಗೆ ಕುಸಿದು ಬಿದ್ದಿದ್ದು ಇದರ ಮಣ್ಣು ಸಮೀಪದಲ್ಲೇ ಇದ್ದ ಮೊಬೈಲ್ ಟವರ್ ನ ಸೆಟ್ಅಪ್ ರೂಮ್ ಗೆ ಅಪ್ಪಳಿಸಿದ್ದು ಸೆಟ್ಅಪ್ ರೂಮ್ ಹಾನಿಯಾದ ಹಿನ್ನೆಲೆ ನೆಟ್ವರ್ಕ್ ಸಮಸ್ಯೆಉಂಟಾಗಿ ಜನರು ಪರದಾಡುವಂತಾಯಿತು. ಅದೃಷ್ಟವಶಾತ್ ಮೊಬೈಲ್ ಟವರ್ ಕೂಡ ಸಮೀಪದಲ್ಲೇ ಇದ್ದು ತಡೆಗೋಡೆ ಟವರ್ ಗೆ ಅಪ್ಪಳಿಸಿದಲ್ಲಿ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇತ್ತು. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Edited By : Somashekar
PublicNext

PublicNext

11/06/2026 10:37 am

Cinque Terre

7.43 K

Cinque Terre

0

ಸಂಬಂಧಿತ ಸುದ್ದಿ