ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ ಟು ಚಳ್ಳಕೆರೆ 'ರಘುಮೂರ್ತಿ' ಜನ್ಮದಿನದ ಹವಾ - ನೆಚ್ಚಿನ ನಾಯಕನಿಗೆ ಮಠಾಧೀಶರು, ಮುಖಂಡರಿಂದ ಶುಭ ಹಾರೈಕೆ!

ಚಿತ್ರದುರ್ಗ : ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ, ಚಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿ ಅವರು 64 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ನಡುವೆ ಮಂತ್ರಿಗಿರಿ ರೇಸ್ ನಲ್ಲಿರುವ MLA ಟಿ.ರಘುಮೂರ್ತಿ ಅವರ ಹುಟ್ಟು ಹಬ್ಬವನ್ನ ಅಭಿಮಾನಿಗಳು ಸಂಭ್ರಮ ಸಡಗರ ಮಾಡಿದ್ದಾರೆ. ಚಳ್ಳಕೆರೆ ಹಾಗೂ ಚಿತ್ರದುರ್ಗ ಸೇರಿದಂತೆ ಹಲವು ಕಡೆ ಕೇಕ್ ಕಟ್ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇನ್ನೂ ಚಳ್ಳಕೆರೆ ಶಾಸಕರ ಭವನಕ್ಕೆ ನೆಚ್ಚಿನ ಶಾಸಕ ಟಿ.ರಘುಮೂರ್ತಿ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಪುಷ್ಪವೃಷ್ಠಿ ಮೂಲಕ ಸ್ವಾಗತಿಸಿದರು.

ಬಳಿಕ ವೇದಿಕೆಗೆ ಶಾಸಕರು ಆಗಮಿಸುತ್ತಿದ್ದಂತೆ ಕೇಕ್ ಕತ್ತರಿಸಿ, ಸಿಹಿ ಹಂಚಿ ಶುಭ ಹಾರೈಸಿದರು. ಈ ವೇಳೆ ಅಭಿಮಾನಿಯೊಬ್ಬರು ಹತ್ತು ರೂಪಾಯಿ ನೋಟಿನ ಹಾರ ಹಾಕಿ, ಶುಭ ಹಾರೈಸಿದ್ದು ವಿಶೇಷವಾಗಿತ್ತು. ಈ ವೇಳೆ ವಿವಿಧ ಮಠಾಧೀಶರು, ಅಧಿಕಾರಿಗಳು, ಅಭಿಮಾನಿಗಳು ಶಾಸಕ ರಘುಮೂರ್ತಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದರು. ಬಳಿಕ ವಿವಿಧ ಸಮುದಾಯಗಳ ಮುಖಂಡರು ಕೂಡಾ ನೆಚ್ಚಿನ ನಾಯಕರಿಗೆ ಬರ್ತ್‌ಡೇ ಶುಭ ಕೋರಿದರು.

ಅಲ್ಲಿಂದ ನೇರವಾಗಿ ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಶಾಸಕರಿಗೆ ಕೈ ಕಾರ್ಯಕರ್ತರು ಭರ್ಜರಿ ಸ್ವಾಗತಿಸಿ, ಜನ್ಮದಿನದ ಶುಭಾಶಯ ತಿಳಿಸಿದರು. ಬಳಿಕ ಅಲ್ಲಿಂದ ನೇರವಾಗಿ ಶಾಸಕರು ಪ್ರವಾಸಿ ಮಂದಿರಕ್ಕೆ ಆಗಮಿಸುತ್ತಿದ್ದಂತೆ, ಅಹೋಬಲ TVS ಶೋರೂಂ ಮಾಲೀಕರಾದ ಅರುಣ್ ಕುಮಾರ್ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಶಾಸಕ ಟಿ.ರಘುಮೂರ್ತಿ ಅವರಿಗೆ ಜಿಲ್ಲಾ ಮಂತ್ರಿ ಆಗುವಂತೆ ಶುಭ ಕೋರಿದರು. ಈ ನಡುವೆ ಜಿಲ್ಲಾ ಕರುನಾಡ ವಿಜಯಸೇವೆ ಅಧ್ಯಕ್ಷ KT ಶಿವಕುಮಾರ್ ನೇತೃತ್ವದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ವಿನೂತನವಾಗಿ ಶಾಸಕರ ಹುಟ್ಟು ಹಬ್ಬ ಆಚರಣೆ ಮಾಡಲಾಯ್ತು. ನೆಚ್ಚಿನ ಕಾರ್ಯಕರ್ತರ ಅಭಿಮಾನ ಕಂಡು ಶಾಸಕ ಟಿ.ರಘುಮೂರ್ತಿ ಸಂತಸ ವ್ಯಕ್ತಪಡಿಸಿದರು.

Edited By : Shivu K
PublicNext

PublicNext

11/06/2026 06:54 pm

Cinque Terre

9.18 K

Cinque Terre

0

ಸಂಬಂಧಿತ ಸುದ್ದಿ