ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಧಾನಸಭಾ ಚುನಾವಣೆಯ ಉಪ ಚುನಾವಣೆ ಇನ್ನೂ ಘೋಷಣೆ ಆಗದಿದ್ರೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದ್ದು, ಹಾಲಿ ಶಾಸಕರು ಸಚಿವರು ತೀರಿಹೋದ್ರೆ ಅವರ ಕುಟುಂಬಸ್ಥರಿಗೇ ಟಿಕೆಟ್ ಕೊಡಬೇಕೆಂಬ ನಿಯಮ ಬದಲಾವಣೆ ಆಗಲಿದೆ ಅಂತ KPCC ರಾಜ್ಯ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ, ಹಿರಿಯೂರು ಟಿಕೆಟ್ ಆಕಾಂಕ್ಷಿ R. ಮಂಜುನಾಥ್ ಹೇಳಿದ್ದಾರೆ.
ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮುಖಂಡರ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷದಲ್ಲಿ ವಿದ್ಯಾರ್ಥಿ ದೆಸೆಯಿಂದ ಸಿಎಂ ಡಿಕೆ ಶಿವಕುಮಾರ್, ಹಾಗೂ KPCC ಅಧ್ಯಕ್ಷ BK ಹರಿಪ್ರಸಾದ್ ಜೊತೆಗೆ ಕೆಲಸ ಮಾಡಿದ್ದು, 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೀನಿ. ಹಾಗಾಗಿ ನಾನೂ ಕೂಡ ಹಿರಿಯೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದಾರೆ. ಇನ್ನು ಹಾಲಿ ಶಾಸಕರು, ಸಚಿವರು ತೀರಿಹೋದ್ರೆ ಅವರ ಕುಟುಂಬದವರಿಗೇ ಟಿಕೆಟ್ ಕೊಡಬೇಕೆಂಬ ನಿಯಮ ಶಾಶ್ವತ ನಿಯಮ ಅಲ್ಲಾ. ಅದು ಕೂಡ ಬದಲಾಗಲಿದೆ ಎಂದಿದ್ದಾರೆ.
PublicNext
15/06/2026 03:21 pm
LOADING...