ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಸೀಟ್‌ಗಾಗಿ ಸಂಬಂಧಿಕರನ್ನು ಕರೆಯಿಸಿ ಹಲ್ಲೆ!

ಚಿತ್ರದುರ್ಗ: KSRTC ಬಸ್‌ನಲ್ಲಿ ಸೀಟ್‌ಗಾಗಿ ಇಬ್ಬರು ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆದು,ಪ್ರಯಾಣಿಕನೋರ್ವ ತನ್ನ ಕುಟುಂಬಸ್ಥರನ್ನ ಕರೆಸಿ ಸಹ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಭರಮಸಾಗರದಿಂದ ಚಿತ್ರದುರ್ಗಕ್ಕೆ ಬಸ್ ಬರುವಾಗ. ಪ್ರಯಾಣಿಕರಿಬ್ಬರು ಸೀಟ್ ವಿಚಾರಕ್ಕೆ ಪರಸ್ಪರ ಜಗಳ ಮಾಡಿಕೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಜಗಳ ಮಾಡಿದವರನ್ನ ಹೊಡೆಯಲು ಓರ್ವ ಪ್ರಯಾಣಿಕ ಜನರನ್ನ ಕರೆಸಿ ಹಲ್ಲೆ ನಡೆಸಿದ್ದಾನೆ. KSRTC ಬಸ್ ನಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿ ಎಂಟು ಜನರ ತಂಡ ಬೆದರಿಕೆ ಹಾಕಿದ್ದಾರೆ. ಈ ವೇಳೆ ಸಹ ಪ್ರಯಾಣಿಕರು ಮೂಕ ಪ್ರೇಕ್ಷಕರಾಗಿದ್ದರು. ಸದ್ಯ ವೀಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.

Edited By : Manjunath H D
PublicNext

PublicNext

11/06/2026 10:34 pm

Cinque Terre

14.09 K

Cinque Terre

0

ಸಂಬಂಧಿತ ಸುದ್ದಿ