ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ರಸ್ತೆ ಪಕ್ಕದ ಚರಂಡಿಗೆ ನುಗ್ಗಿದ ಸಿಲಿಂಡರ್ ತುಂಬಿದ್ದ - ಲಾರಿ ತಪ್ಪಿದ ಅನಾಹುತ

ಚಿಕ್ಕಮಗಳೂರು: ನಗರದ ಹೊರವಲಯದ ಹಿರೇಕೊಳಲೆ ರಸ್ತೆಯಲ್ಲಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಗ್ಯಾಸ್ ಗೋಡೌನ್‌ಗೆ ತೆರಳುತ್ತಿದ್ದ ಸಿಲಿಂಡರ್ ತುಂಬಿದ್ದ ಗ್ಯಾಸ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದಿದೆ.

ಅದೃಷ್ಟವಶಾತ್ ಲಾರಿಯ ಚಕ್ರಗಳು ಚರಂಡಿಯಲ್ಲಿ ಗಟ್ಟಿಯಾಗಿ ಜಾಮ್ ಆದ ಪರಿಣಾಮ ವಾಹನವು ಸಂಪೂರ್ಣವಾಗಿ ಪಲ್ಟಿಯಾಗದೆ ಹಾಗೆಯೇ ಬಾಗಿ ನಿಂತಿದೆ. ಲಾರಿಯು ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ತಾಗಿ ನಿಂತಿದ್ದು, ಒಂದು ವೇಳೆ ಲಾರಿ ಸಂಪೂರ್ಣವಾಗಿ ಉರುಳಿಬಿದ್ದಿದ್ದರೆ ವಿದ್ಯುತ್ ಕಂಬ ಮುರಿದು ಅಪಾಯ ಸಂಭವಿಸುವ ಸಾಧ್ಯತೆಯಿತ್ತು. ಚರಂಡಿಯಲ್ಲಿ ಚಕ್ರಗಳು ಭದ್ರವಾಗಿ ಸಿಲುಕಿಕೊಂಡಿದ್ದೇ ಈ ದೊಡ್ಡ ಗಂಡಾಂತರ ತಪ್ಪಲು ಪ್ರಮುಖ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By :
Kshetra Samachara

Kshetra Samachara

12/06/2026 02:06 pm

Cinque Terre

2.28 K

Cinque Terre

0

ಸಂಬಂಧಿತ ಸುದ್ದಿ