ಕುಂದಗೋಳ : ಮಳೆಯ ರಭಸಕ್ಕೆ ಹಂಚಿನಾಳ ಮತ್ತು ಕಮಡೊಳ್ಳಿ ಮಾರ್ಗ ಮಧ್ಯದ ಹಳ್ಳದ ಬಳಿ ರಸ್ತೆ ಮತ್ತು ತಡೆಗೋಡೆ ಕುಸಿದು ಬಿದ್ದ ಪರಿಣಾಮ ಸಂಚಾರಕ್ಕೆ ಅಪಾಯ ಭೀತಿ ತಲೆದೋರಿದೆ.
ಹೌದು ! ಜಿಲ್ಲಾಧಿಕಾರಿಗಳು ಮಳೆ ಮುನ್ಸೂಚನೆ ಅವಘಡ ತಡೆಯಲು ಸಿದ್ಧತೆಯಲ್ಲಿರುವಂತೆ ತಿಳಿಸಿದ್ದರೂ ಕುಂದಗೋಳ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇಂದಿಗೂ ಕಾರ್ಯಪ್ರವೃತ್ತರಾಗಿಲ್ಲ.
ಇದಕ್ಕೆ ಸೂಕ್ತ ಉದಾಹರಣೆ ಹಂಚಿನಾಳ ಕಮಡೊಳ್ಳಿ ಮಾರ್ಗ ಮಧ್ಯದ ರಸ್ತೆ ಹಾಗೂ ಹಳ್ಳದ ತಡೆಗೋಡೆ ಕೊಚ್ಚಿ ಹೋಗಿದೆ, ಈ ಪರಿಣಾಮ ವಾಹನ ಓಡಾಟದ ವೇಳೆ ಯಾವ ಅಪಘಾತ ಸಂಭವಿಸುತ್ತೋ ತಿಳಿಯದಾಗಿದೆ.
ಪರಿಸ್ಥಿತಿ ಹೀಗಿದ್ದರೂ ಲೋಕೋಪಯೋಗಿ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಮಳೆಗೆ ಹಾಳಾದ ರಸ್ತೆ ಹಾಗೂ ಬ್ರಿಡ್ಜ್ ನಿರ್ಮಾಣಕ್ಕೆ ಯಾವುದೇ ಪೂರಕ ಕ್ರಮ ಕೈಗೊಳ್ಳದೇ ಇರೋದು ಜನರಲ್ಲಿ ಬೇಸರ ತಂದಿದೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/06/2026 02:36 pm
LOADING...