ಶಿವಮೊಗ್ಗ : ಸಕ್ರೆಬೈಲು ಆನೆ ಬಿಡಾರದಲ್ಲಿ ಪದೇ ಪದೇ ಆನೆಗಳ ಸ್ಥಿತಿ ಆಯೋಮಯವಾಗ್ತಿದೆ. ವಿಕ್ರಾಂತ್, ಬಾಲಣ್ಣ ಸೇರಿ ಹಲವು ಆನೆ ಸರಿಯಾದ ಚಿಕಿತ್ಸೆ ಸಿಗದೇ ಸೊರಗಿ ಹೋಗಿವೆ. ಅದರಲ್ಲೂ ವಿಕ್ರಾಂತ್ ಆನೆಯ ಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಹೌದು, ಶಿವಮೊಗ್ಗ ಸಕ್ರೇಬೈಲು ಆನೆ ಶಿಬಿರದಲ್ಲಿರುವ ವಿಕ್ರಾಂತ್ ಆನೆ ಕಾಲಿಗೆ ಈ ಹಿಂದೆ ಗಾಯವಾಗಿತ್ತು, ಹಾಸನ ಜಿಲ್ಲೆಯ ಸಕಲೇಶಪುರದ ಬಳಿ ಹಿಡಿದು ತಂದಿದ್ದ ವಿಕ್ರಾಂತ್ ಆನೆಯನ್ನ ಸಕ್ರೆಬೈಲು ಬಿಡಾರಕ್ಕೆ ಬಿಡಲಾಗಿತ್ತು. ನಂತರ ಬಿಡಾರದಲ್ಲಿ ಆನೆಗೆ ಗಾಯವಾಗಿತ್ತು. ಗಾಯಕ್ಕೆ ಸರಿಯಾದ ಚಿಕಿತ್ಸೆ ಸಿಗದೇ ಇದೀಗ ಗಂಭೀರ ಸ್ಥಿತಿಗೆ ವಿಕ್ರಾಂತ್ ತಲುಪಿದ್ದಾನೆ. ನೋವಿನಿಂದ ವಿಕ್ರಾಂತ್ ಆನೆ ನರಳುತ್ತಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಸಕ್ರೇಬೈಲು ಆನೆ ಬಿಡಾರದಲ್ಲಿ ಸರಿಯಾದ ನಿರ್ವಹಣೆ ಇಲ್ದೆ ಆನೆಗಳು ನೋವು ಪಡ್ತಿವೆ. ಆನೆಯ ಸ್ಥಿತಿ ಕಂಡು ಪರಿಸರ ವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಸಕ್ರೇಬೈಲು ಆನೆ ಬಿಡಾರದಲ್ಲಿ ಪದೇ ಪದೇ ಆನೆ ಗಳು ಖಾಯಿಲೆಗೊಳಗಾಗುತ್ತಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ಈ ಹಿಂದೆ ಬಾಲಣ್ಣ ಕಿವಿ ವಿಚಾರದಲ್ಲೂ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಬಾಲಣ್ಣ ನ ಕಿವಿ ಕಟ್ ಮಾಡಲಾಗಿತ್ತು. ಇದೀಗ ವಿಕ್ರಾಂತ್ ಕಾಲಿನಲ್ಲಿ ಕೀವು ಕಾಣಿಸಿಕೊಂಡು ದಿನನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮಕ್ಕೆ ಪರಿಸರ ವಾದಿಗಳು ಆಗ್ರಹಿಸಿದ್ದಾರೆ.
ಒಟ್ಟಾರೆ, ಆನೆಗಳ ರಕ್ಷಣೆಗಾಗಿ ಕೋಟಿಗಟ್ಟಲೇ ಸರ್ಕಾರ ಹಣ ವ್ಯಯಿಸುತ್ತದೆ. ಆದರೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯ ದಿಂದ ಇದೀಗ ವಿಕ್ರಾಂತ್ ಆನೆ ಸಾವು ಬದುಕಿನ ಹೋರಾಡುವಂತಾಗಿರುವುದು ದುರಂತವೇ ಸರಿ..
ವೀರೇಶ್ ಜಿ ಹೊಸೂರ್, ಪಬ್ಲಿಕ್ ನೆಕ್ಸ್ಟ್. ಶಿವಮೊಗ್ಗ...
PublicNext
13/06/2026 12:02 pm