ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತರೀಕೆರೆ: ನಾಯಿ ಬೇಟೆಗೆ ಬಂದು ಗೂಡಿನಲ್ಲೇ ಲಾಕ್ ಆದ ಚಿರತೆ: ಕೊನೆಗೂ ಸೆರೆ!

ತರೀಕೆರೆ: ಹಲವು ದಿನಗಳಿಂದ ಭೀತಿ ಸೃಷ್ಟಿಸಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆಯ ಮೂಲಕ ಸೆರೆ ಹಿಡಿದಿದ್ದಾರೆ. ಕಳೆದ ರಾತ್ರಿ ಜನವಸತಿ ಪ್ರದೇಶಕ್ಕೆ ಲಗ್ಗೆ ಇಟ್ಟಿದ್ದ ಈ ಚಿರತೆಯು, ನಾಯಿ ಬೇಟೆಯಾಡುವ ಉದ್ದೇಶದಿಂದ ನಾಯಿ ಗೂಡಿಗೆ ನುಗ್ಗಿದಾಗ ಅಲ್ಲಿಯೇ ಸಿಕ್ಕಿಬಿದ್ದಿದೆ. ಮುಂಜಾನೆ ನಾಯಿ ಗೂಡಿನಲ್ಲಿ ಚಿರತೆ ಇರುವುದನ್ನು ಕಂಡು ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದರು ಮತ್ತು ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ಅವರೊಂದಿಗೆ ಶಿವಮೊಗ್ಗದಿಂದ ಬಂದ ಅರವಳಿಕೆ ತಜ್ಞರು ಕಾರ್ಯಾಚರಣೆಗೆ ಸಾಥ್ ನೀಡಿದರು. ಅತ್ಯಂತ ಜಾಗರೂಕತೆಯಿಂದ ಚಿರತೆಗೆ ಡಾರ್ಟ್ ಮಾಡುವ ಮೂಲಕ ಅರವಳಿಕೆ ನೀಡಿ, ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಯಾರಿಗೂ ಯಾವುದೇ ರೀತಿಯ ಹಾನಿಯಾಗದೆ ಕಾರ್ಯಾಚರಣೆ ಸುಖಾಂತ್ಯಗೊಂಡಿದ್ದು, ಚಿರತೆ ಸೆರೆಯಾದ ದೃಶ್ಯವನ್ನು ವೀಕ್ಷಿಸಲು ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಸದ್ಯ ಸೆರೆಸಿಕ್ಕ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ ಸದ್ಯ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Edited By :
PublicNext

PublicNext

20/06/2026 06:28 pm

Cinque Terre

5.94 K

Cinque Terre

0

ಸಂಬಂಧಿತ ಸುದ್ದಿ