ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಬೈಕ್‌ನಲ್ಲಿ ನಾಗರಹಾವು : ಮಾಲೀಕನ ಎದೆ ಝಲ್ಲೆಂದ ಕ್ಷಣ!

ಶಿವಮೊಗ್ಗ : ತಾಲೂಕಿನ ಹೊಳೆಬೆನವಳ್ಳಿ ಗ್ರಾಮದ ತೋಟವೊಂದರಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಒಳಗೆ ನಾಗರಹಾವು ಸೇರಿಕೊಂಡು ಬೈಕ್‌ ಮಾಲೀಕರಿಗೆ ಆತಂಕ ಮೂಡಿಸಿತ್ತು. ಕೂಡಲೆ ಶಿವಮೊಗ್ಗದ ಉರಗ ರಕ್ಷಕ ಸ್ನೇಕ್‌ ಕಿರಣ್‌ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಗ್ರಾಮದ ರೈತ ದುರ್ಗಪ್ಪ ಎಂಬುವರು ತೋಟದಲ್ಲಿ ಜೆಸಿಬಿ ಕೆಲಸ ನಡೆಯುತ್ತಿದ್ದ ಕಾರಣ ತಮ್ಮ ಬೈಕನ್ನು ಬದಿಗೆ ನಿಲ್ಲಿಸಿದ್ದರು. ಈ ವೇಳೆ ಮಣ್ಣಿನ ಗುಡ್ಡದ ಕಡೆಯಿಂದ ಬಂದ ನಾಗರಹಾವು ನೇರವಾಗಿ ಬೈಕ್‌ನ ಒಳಭಾಗಕ್ಕೆ ಸೇರಿಕೊಂಡಿದೆ. ಸ್ಥಳಕ್ಕೆ ಧಾವಿಸಿದ ಉರಗ ರಕ್ಷಕ ಸ್ನೇಕ್‌ ಕಿರಣ್‌ ಅವರು ಬೈಕ್ ಒಳಗೆ ಅಡಗಿದ್ದ ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

Edited By :
PublicNext

PublicNext

17/06/2026 07:54 am

Cinque Terre

9.82 K

Cinque Terre

0

ಸಂಬಂಧಿತ ಸುದ್ದಿ