ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಜೋಡಿ ಹುಲಿಗಳು ದರ್ಶನ ನೀಡಿವೆ. ತಾಯಿ ಜೊತೆಯಲ್ಲಿದ್ದ ಮರಿ ಹುಲಿಯನ್ನ ಕಂಡ ಪ್ರವಾಸಿಗರು ಸಂತಸಗೊಂಡಿದ್ದಾರೆ.
ಬಂಡೀಪುರದ ವೆಸ್ಲಿ ಸಫಾರಿ ಮಾರ್ಗದಲ್ಲಿ ಸಫಾರಿ ವಾಹನಗಳ ಸನಿಹದಲ್ಲೇ ತಾಯಿ ಹುಲಿ ಮರಿಯ ಜೊತೆ ಮುಂದೆ ಸಾಗುತ್ತಿರುವ ಅಪರೂಪದ ದೃಶ್ಯ ಪ್ರವಾಸಿಗರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ, ಹಚ್ಚಹಸಿರಿನಿಂದ ಕೂಡಿದ ಬಂಡೀಪುರದಲ್ಲಿ ಸಫಾರಿಗೆ ಬಂದಂತಹ ಪ್ರವಾಸಿಗರಿಗೆ ನಿರಾಸೆಯುಂಟು ಮಾಡದ ವನ್ಯಜೀವಿಗಳು ದರ್ಶನ ನೀಡುತ್ತಿರುವುದು ಅಚ್ಚರಿ ಉಂಟುಮಾಡಿದೆ. ಈ ಕುರಿತಾಗಿ ಅಭಿಪ್ರಾಯ ಹಂಚಿಕೊಂಡಿರುವ ಬೆಂಗಳೂರು ಮೂಲದ ಪ್ರದೀಪ್ ಕುಮಾರ್ ಬಂಡೀಪುರದಲ್ಲಿನ ಹಚ್ಚಹಸಿರಿನ ಸೊಬಗಿನ ಕಾನನದ ನಡುವೆ ಸಂಚರಿಸುವುದೇ ಒಂದೊಳ್ಳೆಯ ಮುದ ನೀಡುತ್ತದೆ ಹುಲಿ ಚಿರತೆಗಳ ಲುಕ್ ನೋಡಿದ್ರೆ ಖುಷಿಯಾಗುತ್ತದೆ ಆದ್ದರಿಂದಲೇ
ವರ್ಷಕ್ಕೆ ನಾಲ್ಕೈದು ಬಾರಿ ಇಲ್ಲಿಗೆ ಸಫಾರಿಗೆ ಬರುತ್ತೇವೆ ಎಂದು ಅನುಭವ ಹಂಚಿಕೊಂಡಿದ್ದಾರೆ.
ಬಂಡೀಪುರ ಸಫಾರಿಗೆ ಬರುವ ಪ್ರವಾಸಿಗರ ಸಂಖ್ಯೆಯು ಸಹ ಏರಿಕೆ ಕಂಡಿದ್ದು ಅಪರೂಪದ ದೃಶ್ಯಗಳನ್ನ ಕಣ್ತುಂಬಿಕೊಳ್ಳುವ ಮೂಲಕ ಪ್ರಾಣಿಪ್ರಿಯರು ಪುಳಕಿತರಾಗುತ್ತಿದ್ದು ಪ್ರತಿನಿತ್ಯ ದರ್ಶನ ನೀಡುವ ಹುಲಿ ಚಿರತೆ ಕರಡಿಗಳು ಪ್ರವಾಸಿಗರನ್ನ ಆಕರ್ಷಿಸುತ್ತಿರುವುದು ಬಂಡೀಪುರದ ಸೊಬಗನ್ನ ಹೆಚ್ಚಿಸುತ್ತಿದೆ. ವನ್ಯಜೀವಿ ಪ್ರಿಯರಿಗೆ ಹಾಟ್ ಸ್ಪಾಟಾಗಿರುವ ಬಂಡೀಪುರ ದೇಶ ವಿದೇಶಗಳಲ್ಲೂ ಪ್ರಖ್ಯಾತಿ ಹೊಂದಿದೆ.
ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ
PublicNext
13/06/2026 05:18 pm
LOADING...