ಗುಂಡ್ಲುಪೇಟೆ : ಗ್ರೈಂಡರ್ ನಿಂದ ಪ್ರವಹಿಸಿದ ವಿದ್ಯುತ್ ಮಗುವನ್ನು ಬಲಿ ಪಡೆದ ಘಟನೆ ತಾಲೂಕಿನ ಕಲ್ಲಿಗೌಡನಹಳ್ಳಿಯಲ್ಲಿ ನಡೆದಿದೆ. ಎರಡು ನಿಮಿಷದ ಅಂತರದಲ್ಲಿ ಹೆತ್ತವರ ಮುಂದೆ ಹಾಡುತ್ತ ಕುಣಿಯುತ್ತಲಿದ್ದ ಮಗು ಉಸಿರು ಚೆಲ್ಲಿದ್ದು ಇಡೀ ಗ್ರಾಮವನ್ನೇ ಕಣ್ಣೀರಿನ ಕೂಪಕ್ಕೆ ತಳ್ಳಿದೆ.
ಗ್ರಾಮದ ಆನಂದ್ ಹಾಗೂ ಪುಟ್ಟಮ್ಮ ದಂಪತಿಯ ಅದ್ವಿತ ಇಡೀ ಕುಟುಂಬವನ್ನು ಬಿಟ್ಟು ಅಗಲಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನಾ ವಿವರ : ಮಂಗಳವಾರ ಸಂಜೆ ತಾಯಿ ಪುಟ್ಟಮ್ಮ ಅಕ್ಕಿಹಿಟ್ಟು ರುಬ್ಬುತ್ತಿದ್ದ ವೇಳೆ ನೀರು ತರಲು ಹೊರಹೋಗಿದ್ದರು ಎನ್ನಲಾಗಿದೆ ಆದರೆ ಪಕ್ಕದ ಮನೆಯಲ್ಲಿ ಆಟವಾಡುತ್ತಿದ್ದ ಪುಟ್ಟ ಕಂದಮ್ಮ ಮನೆಗೆ ವಾಪಸ್ಸಾಗಿದೆ ಚಾಲ್ತಿಯಲ್ಲಿದ್ದ ಗ್ರೈಂಡರ್ ಬಳಿ ಬಂದು ಕುತೂಹಲದಿಂದ ಕೈ ಹಾಕಿದ್ದೇ ತಡ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಅಸುನೀಗಿದೆ. ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದ್ದು ಮಗು ಕಳೆದುಕೊಂಡ ತಂದೆ ತಾಯಿ ಅವರ ಪೋಷಕರನ್ನು ಸಂತೈಸುವುದಾದರೂ ಹೇಗೆ ಎಂದು ಸ್ಥಳೀಯರು ಮರುಗಿದ್ದಾರೆ.
ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ
PublicNext
17/06/2026 01:57 pm
LOADING...