ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ: ಬಂಡೀಪುರದಲ್ಲಿ ನೀಳದಂತದ ಗಜ - ಕಬಿನಿ ಹಿನ್ನೀರಿನ ಭೋಗೇಶ್ವರ ತದ್ರೂಪಿ ಸಲಗ

ಗುಂಡ್ಲುಪೇಟೆ : ತನ್ನ ಉದ್ದನೆಯ ನೀಳದಂತದಿಂದಲೇ ಪ್ರಖ್ಯಾತಿಯಾಗಿದ್ದ ಕಬಿನಿ ಹಿನ್ನೀರಿನ ರಾಜ ಭೋಗೇಶ್ವರನನ್ನೇ ಹೋಲುವಂತಿರುವ ಒಂಟಿ ಸಲಗ ಬಂಡೀಪುರದಲ್ಲಿ ದರ್ಶನ ನೀಡುತ್ತಿರುವುದು ಪ್ರವಾಸಿಗರಿಗೆ ಅಚ್ಚರಿ ಮೂಡಿಸಿದೆ ಥೇಟ್ ಭೋಗೇಶ್ವರ ಆನೆಯೇ ಎದುರು ಬಂತೇನೋ ಎನ್ನುವಷ್ಟು ಹುಬ್ಬೇರಿಸುತ್ತಿದೆ.

ಕಬಿನಿ ಹಿನ್ನೀರಿನ ಭೋಗೇಶ್ವರ ಆನೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಅದೆಷ್ಟೋ ಮಂದಿ ಈ ಆನೆಯ ದಂತಗಳನ್ನ ನೋಡಲು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು, ತನ್ನದೇ ಆದ ವಿಭಿನ್ನತೆ, ಗಾಂಭೀರ್ಯ ನಡಿಗೆ, ಉದ್ದನೆಯ ಕೂಡು ದಂತಗಳನ್ನ ಹೊಂದಿದ್ದ ಭೋಗೇಶ್ವರ ಆನೆ ಸಫಾರಿ ಪ್ರಿಯರಿಗೆ ಬಲು ಇಷ್ಟವಾಗಿತ್ತು.

ಆದರೆ ಭೋಗೇಶ್ವರನ ಸಾವಿನ ನಂತರ ಕಬಿನಿ ಹಿನ್ನೀರಿಗೆ ಬರುವ ಪ್ರವಾಸಿಗರಿಗೆ ನಿರಾಸೆಯುಂಟಾಗಿತ್ತು ಸದ್ಯ ಬಂಡೀಪುರದಲ್ಲಿ ಕಾಣಿಸಿಕೊಂಡಿರುವ ಸಲಗ ಭಾರಿ ಸಂಚಲನ ಮೂಡಿಸಿದೆ.

ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ

Edited By :
PublicNext

PublicNext

18/06/2026 11:40 am

Cinque Terre

8.47 K

Cinque Terre

0

ಸಂಬಂಧಿತ ಸುದ್ದಿ