ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್; 'ಫೇಲ್' ಆಗಿದ್ದ ನಗರಸಭೆ ಈಗ ಆ್ಯಕ್ಷನ್ ಮೋಡ್‌ನಲ್ಲಿ- ಬಸ್ ನಿಲ್ದಾಣ ದುರಸ್ತಿ ಆರಂಭ

ಉಡುಪಿ: ಬಸ್ ನಿಲ್ದಾಣದ ಅವ್ಯವಸ್ಥೆ, ಮಳೆ ಬಂದಾಗ ಮೇಲ್ಛಾವಣಿಯಿಂದ ನೀರು ಸೋರಿಕೆ, ಜಾರುವ ನೆಲ ಹಾಗೂ ಮೂಲಸೌಕರ್ಯಗಳ ಕೊರತೆ ಕುರಿತು ಸಾರ್ವಜನಿಕರು ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಮೂಲಕ ವ್ಯಕ್ತಪಡಿಸಿದ್ದ ಆಕ್ರೋಶದ ಬಳಿಕ ನಗರಸಭೆ ಅಧಿಕಾರಿಗಳು ಸಮಸ್ಯೆಯ ಗಂಭೀರತೆಯನ್ನು ಅರಿತು ಕ್ರಮ ಕೈಗೊಂಡಿದ್ದಾರೆ.

ಉಡುಪಿಯಲ್ಲಿ ಸಂಪೂರ್ಣ ಫೇಲ್ ಆದ ನಗರಸಭೆ ಅನ್ನುವ ಶೀರ್ಷಿಕೆಯಲ್ಲಿ ಸುದ್ದಿ ಬಿತ್ತರಿಸಿದ್ದ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಬಿಗ್ ಇಂಪ್ಯಾಕ್ ಸ್ಟೋರಿ ಇದು...

ಬಸ್ ನಿಲ್ದಾಣದ ಮೇಲ್ಛಾವಣಿ ದುರಸ್ತಿ ಹಾಗೂ ಹಾನಿಗೊಳಗಾದ ನೆಲದ ಮರುನಿರ್ಮಾಣ ಕಾಮಗಾರಿಗಳು ಈಗಾಗಲೇ ಆರಂಭಗೊಂಡಿದ್ದು, ಹಲವು ವರ್ಷಗಳಿಂದ ಪ್ರಯಾಣಿಕರನ್ನು ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗುತ್ತಿರುವುದರಿಂದ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಮಳೆಗಾಲದಲ್ಲಿ ಪ್ರಯಾಣಿಕರು ಕೊಡೆ ಹಿಡಿದು ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಜಾರುವ ಮೆಟ್ಟಿಲುಗಳು ಮತ್ತು ಒಡೆದ ನೆಲದಿಂದ ಅಪಘಾತಗಳೂ ಸಂಭವಿಸುತ್ತಿದ್ದವು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬಳಿಕ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಕಾಮಗಾರಿ ಆರಂಭಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Edited By : Shivu K
PublicNext

PublicNext

13/06/2026 08:22 pm

Cinque Terre

5.09 K

Cinque Terre

1

ಸಂಬಂಧಿತ ಸುದ್ದಿ