ರಾಯಬಾಗ : ಸ್ವಚ್ಛ ಸುಂದರ ಪರಿಸರ ನಿರ್ಮಾಣ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಸ್ವಚ್ಛತೆ ಕಡೆಗೆ ಗಮನ ಹರಿಸಬೇಕು ಎಂಬ ಆಶಯದೊಂದಿಗೆ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ ಮಠದ ಪೀಠಾಧಿಪತಿಗಳಾದ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿಯವರು ಇಂದು ಬೆಳಗ್ಗೆ ಶ್ರೀಮಠದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಪೊರಕೆ ಹಿಡಿದು ಕಸಗುಡಿಸಿದ ಶ್ರೀಗಳು, ಪುರಸಭೆಯ ಪೌರಕಾರ್ಮಿಕರೊಂದಿಗೆ ತಾವು ಕಾರ್ಮಿಕರಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಶ್ರೀಕಾಂತ ಗುರೂಜಿ, ಶಿವಾನಂದ ಮೆಕ್ಕಳಕಿ, ಪುರಸಭೆ ಸದಸ್ಯರಾದ ಪರಪ್ಪ ಖೇತಗೌಡರ್, ಚೇತನ್ ಯಡವನ್ನವರ, ರಾಜಶೇಖರ ನಾಯಿಕ, ಮಹಾಂತೇಶ ಎರಡತ್ತಿ, ಮಂಗಲ ಪಣದಿ, ಪೌರಕಾರ್ಮಿಕರು ಹಾಗೂ ಶ್ರೀಮಠದ ಭಕ್ತ ಮಂಡಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಚಿದಾನಂದ ಐಹೊಳೆ ಪಬ್ಲಿಕ್ ನೆಕ್ಸ್ಟ್ ರಾಯಬಾಗ
Kshetra Samachara
15/06/2026 08:06 am
LOADING...