ಕಳಸ: ಭಾರೀ ಗಾತ್ರದ ಹೆಬ್ಬಾವೊಂದು ಪ್ರತ್ಯಕ್ಷವಾಗಿ ತೋಟದ ಕಾರ್ಮಿಕರಲ್ಲಿ ಆತಂಕ ಸೃಷ್ಟಿಸಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ದಾರಿಮನೆ ಗ್ರಾಮದ ಕಾಫಿ ತೋಟವೊಂದರಲ್ಲಿ ನಡೆದಿದೆ. ಕಾರ್ಮಿಕರು ಎಂದಿನಂತೆ ಕೆಲಸ ಮಾಡುತ್ತಿದ್ದಾಗ, ಮರದ ಬುಡದಲ್ಲಿ ಅವಿತು ಕುಳಿತಿದ್ದ ಬೃಹತ್ ಹೆಬ್ಬಾವು ದಿಢೀರನೆ ಬುಸುಗುಟ್ಟಿ ಅಟ್ಯಾಕ್ ಮಾಡಲು ಮುಂದಾಗಿದೆ. ಹಾವಿನ ರೌದ್ರಾವತಾರವನ್ನು ಕಂಡು ದಿಕ್ಕೆಟ್ಟ ಕಾರ್ಮಿಕರು ಭಯದಿಂದ ಅಲ್ಲಿಂದ ಓಡಿಹೋಗಿದ್ದಾರೆ.
ಸುಮಾರು ಏಳು ಅಡಿ ಉದ್ದವಿದ್ದ ಈ ಹೆಬ್ಬಾವು ಯಾವುದೋ ಪ್ರಾಣಿಯನ್ನು ನುಂಗಿ ಜೀರ್ಣಿಸಿಕೊಳ್ಳಲಾಗದೆ, ತೆವಳಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಮರದ ಬುಡದಲ್ಲೇ ಆಶ್ರಯ ಪಡೆದಿತ್ತು. ತಕ್ಷಣವೇ ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು ಸ್ಥಳಕ್ಕೆ ಉರಗ ತಜ್ಞ ಸ್ನೇಕ್ ರಿಜ್ವಾನ್
ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿ ಹೆಬ್ಬಾವನ್ನು ಸೆರೆಹಿಡಿದಿದ್ದಾರೆ. ತೋಟದಲ್ಲಿದ್ದ ಬೃಹತ್ ಹೆಬ್ಬಾವು ಯಾವುದೇ ಅಪಾಯವಿಲ್ಲದೆ ಸೆರೆಯಾಗುತ್ತಿದ್ದಂತೆ ಕಾರ್ಮಿಕರು ಮತ್ತು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆಹಿಡಿದ ಹೆಬ್ಬಾವನ್ನು ಅಧಿಕಾರಿಗಳ ಸಮ್ಮುಖದಲ್ಲೇ ಸುರಕ್ಷಿತವಾಗಿ ದಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
PublicNext
16/06/2026 01:00 pm
LOADING...