ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎನ್.ಆರ್.ಪುರ: ಸಹೋದ್ಯೋಗಿಯ ಸಮಯಪ್ರಜ್ಞೆ: ಕಿರುಚಾಟಕ್ಕೆ ಹೆದರಿ ಓಡಿದ ಕಾಡಾನೆ - ಕೂದಲೆಳೆ ಅಂತರದಲ್ಲಿ ಬದುಕುಳಿದ ಜೀವ

ಎನ್.ಆರ್.ಪುರ: ಕಾಫಿನಾಡಿನಲ್ಲಿ ಕಾಡಾನೆ ಮಾನವ ಸಂಘರ್ಷಕ್ಕೆ ಮುಂದುವರೆದಿದ್ದು ಕಾಡಾನೆ ದಾಳಿಗೆ ಅರಣ್ಯ ಇಲಾಖೆಯ ವಾಚರ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಭದ್ರಾ ಅಭಯಾರಣ್ಯದ ಹೆಬ್ಬೆ ವಲಯದ ಕಳ್ಳ ಬೇಟೆ ಶಿಬಿರದ ವಾಚರ್ ಹರೀಶ್ ಎಂಬುವವರ ಮೇಲೆ ಶುಕ್ರವಾರ ಸಂಜೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದೆ. ಹೆಬ್ಬೆ ದೇವಸ್ಥಾನದ ಸಮೀಪ ಇಬ್ಬರು ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ದಾಳಿಯ ವೇಳೆ ಆನೆಯು ಹರೀಶ್ ಅವರನ್ನು ತುಳಿದು, ಸೊಂಡಿಲಿನಿಂದ ತಳ್ಳಿದೆ. ಈ ಸಂದರ್ಭದಲ್ಲಿ ಜೊತೆಯಲ್ಲಿದ್ದ ಮತ್ತೊಬ್ಬ ವೀಕ್ಷಕ ತಕ್ಷಣವೇ ಸಮಯಪ್ರಜ್ಞೆ ಮೆರೆದು ದೂರ ಓಡಿ ಹೋಗಿ ಮರೆಯಲ್ಲಿ ನಿಂತು ಜೋರಾಗಿ ಕಿರುಚಾಡಿದ್ದರಿಂದ ಆನೆಯು ಹೆದರಿ ಕಾಡಿನೊಳಗೆ ಓಡಿ ಹೋಗಿದೆ.

ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡು ನರಳಾಡುತ್ತಿದ್ದ ಹರೀಶ್ ಅವರನ್ನು ತಕ್ಷಣವೇ ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಸ್ಪೈನಲ್ ಕಾರ್ಡ್‌ಗೆ (ಬೆನ್ನುಮೂಳೆ) ಗಂಭೀರವಾದ ಪೆಟ್ಟು ಬಿದ್ದು ಮುರಿದ ಹಿನ್ನೆಲೆಯಲ್ಲಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ಗಾಯಾಳುವಿನ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದರಿಂದ ಶಿವಮೊಗ್ಗದ ವೈದ್ಯರ ಸೂಚನೆ ಮೇರೆಗೆ ಸದ್ಯ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.

ಇನ್ನು ಘಟನೆ ನಡೆದ ಸ್ಥಳಕ್ಕೆ ಎನ್.ಆರ್.ಪುರ ಆರ್.ಎಫ್.ಓ ಪ್ರವೀಣ್ ಹಾಗೂ ವೈಲ್ಡ್ ಲೈಫ್ ಆರ್.ಎಫ್.ಓ ಗೌರವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Vinayak Patil
Kshetra Samachara

Kshetra Samachara

20/06/2026 10:08 am

Cinque Terre

2.04 K

Cinque Terre

0

ಸಂಬಂಧಿತ ಸುದ್ದಿ