ಭಟ್ಕಳ: ಶಿರಾಲಿಯ ತಟ್ಟಿಹಕ್ಕಲು ಅಯ್ಯಪ್ಪ ಭಕ್ತರ ತಂಡವೊಂದು ಶಬರಿಮಲೈ ದರ್ಶನದ ಸಂದರ್ಭದಲ್ಲಿ ಭಟ್ಕಳದ ದೇವಿ ಶಕ್ತಿ ಸ್ಥಳ ಮುರಿನಕಟ್ಟೆ ವಿವಾದವು ಶೀಘ್ರವಾಗಿ ಬಗೆಹರಿದು, ಎಲ್ಲರಿಗೂ ನ್ಯಾಯಸಮ್ಮತ ಹಾಗೂ ಶಾಂತಿಯುತ ಪರಿಹಾರ ದೊರೆಯಲಿ ಎಂದು ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿತು.
ಭಕ್ತರು ಮುರಿನಕಟ್ಟೆ ವಿಚಾರದಲ್ಲಿ ಸೌಹಾರ್ದತೆ ನೆಲೆಸಿ, ಯಾವುದೇ ರೀತಿಯ ಉದ್ವಿಗ್ನತೆ ಉಂಟಾಗದೆ ಸಮಸ್ಯೆ ಶೀಘ್ರ ಇತ್ಯರ್ಥವಾಗಲಿ ಹಾಗೂ ಪ್ರದೇಶದಲ್ಲಿ ಶಾಂತಿ, ಸೌಹಾರ್ದ ಮತ್ತು ಅಭಿವೃದ್ಧಿಯ ವಾತಾವರಣ ನಿರ್ಮಾಣವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ತಂಡದ ಗುರುಸ್ವಾಮಿ ಮೋಹನ್ ಹಾಗೂ ಎನ್.ಡಿ. ಸಾನಬಾಗ್ ಸೇರಿದಂತೆ ಇತರ ಅಯ್ಯಪ್ಪ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು, ಭಟ್ಕಳ ಮತ್ತು ಶಿರಾಲಿ ಭಾಗದ ಜನರ ಕ್ಷೇಮ, ಸುಖ-ಶಾಂತಿ ಹಾಗೂ ಸಮೃದ್ಧಿಗಾಗಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದರು.
Kshetra Samachara
16/06/2026 04:47 pm
LOADING...