ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದ್ಯಾರ್ಥಿ ಸಾವಿಗೆ ನ್ಯಾಯಕ್ಕಾಗಿ ಕಣ್ಣೀರ ಪ್ರತಿಭಟನೆ, ಸಿದ್ದಾಪುರದಲ್ಲಿ ಆಕ್ರೋಶ

ಸಿದ್ದಾಪುರ : ತಾಲೂಕಿನ ಕಾನಸೂರ್ ನಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಹಾರ್ಸಿಕಟ್ಟಾ ಸಮೀಪದ ವಿದ್ಯಾರ್ಥಿಯು ಇತ್ತೀಚೆಗೆ ಮೃತಪಟ್ಟಿದ್ದು ಸಾವಿಗೆ ನ್ಯಾಯ ಒದಗಿಸಿಕೊಡಬೇಕು, ಅವನ ಸಾವಿನಲ್ಲಿ ನಮಗೆ ಅನುಮಾನ ಇದೆ ಎಂದು ಸಿದ್ದಾಪುರ ತಾಲೂಕು ಒಕ್ಕಲಿಗರ ಸಮುದಾಯ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಚಂದ್ರಗುತ್ತಿ ಸರ್ಕಲ್ ನಿಂದ ಹೊರಟ ಪ್ರತಿಭಟನಾ ಮೆರವಣಿಗೆ ಸಿರ್ಸಿ ಸಿದ್ದಾಪುರ ಮುಖ್ಯ ರಸ್ತೆಯ ಮೂಲಕ ಹೊಸ ಬಸ್ ನಿಲ್ದಾಣ ಹಾಗೂ ರಾಜ್ಯಮಾರ್ಗ ಮೂಲಕ ಅಂಬೇಡ್ಕರ್ ಸರ್ಕಲ್ ತಲುಪಿ ಅಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಸಭೆ ನಡೆಸಿದರು.

ಪ್ರಮುಖರಾದ ಭಾಸ್ಕರ್ ಪಟಗಾರ ಕುಮಟ, ವಿನಾಯಕ್ ಪಟಗಾರ, ಎಂ ಟಿ ಗೌಡ, ಮೋಹನ್ ಗೌಡ ಮಾತನಾಡಿ ತೀವ್ರ ಆಕ್ರೋಶ ಹೊರ ಹಾಕಿದರು.ಮೃತ ಬಾಲಕನ ತಾಯಿ ನನಗೆ ನನ್ನ ಮಗನ ಸಾವಿನ ಸತ್ಯತೆ ತಿಳಿಯಬೇಕು ಕೂಡಲೇ ಕ್ರಮ ವಹಿಸಿ ಅಲ್ಲಿನ ಅಧಿಕಾರಿಗಳನ್ನು ಸಿಬ್ಬಂದಿಗಳನ್ನು ವಿಚಾರಣೆ ನಡೆಸಿ ಅಮಾನತು ಮಾಡಬೇಕು, ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ವಿಧಿಸಿ ನ್ಯಾಯ ಒದಗಿಸಿ ಕೊಡಿ ಎಂದರು.ಪೊಲೀಸರು ಒಂದು ವಾರದ ಗಡುವಿನ ಭರವಸೆ ನೀಡಿದರು.

ಒಂದು ವಾರದಲ್ಲಿ ಕ್ರಮವಾಗದಿದ್ದರೆ ಹೋರಾಟಗಾರರು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು..ತಳಕ್ಕೆ ಶಿರಸಿ ವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್, ಸಿದ್ದಾಪುರ ಪ್ರಭಾರ ತಹಸೀಲ್ದಾರ್‌ರು ಮನವಿ ಆಲಿಸಿ , ಒಂದು ವಾರದೊಳಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Edited By : PublicNext Desk
Kshetra Samachara

Kshetra Samachara

18/06/2026 11:09 pm

Cinque Terre

1.44 K

Cinque Terre

0

ಸಂಬಂಧಿತ ಸುದ್ದಿ