ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಠರಾವಗೆ ಕಾನೂನಿನಲ್ಲಿ ತೊಡಕಿಲ್ಲ - ಹೈಕೋರ್ಟ್ ನ್ಯಾಯವಾದಿ ಮೋಹನ್ ಕಾತರಕಿ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯೂ ಭಾರತೀಯ ಮುನ್ಸಿಪಲ್ ಕಾನೂನಿನ ಅಡಿಯಲ್ಲೇ ಕಾರ್ಯನಿರ್ವಹಿಸುತ್ತಿದೆ.

ಬೆಳಗಾವಿಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳುವ ನಿರ್ಧಾರವನ್ನು ಸಂಸತ್ತು ಕೈಗೊಂಡಿದೆ. ಬೆಳಗಾವಿ ಮಹಾನಗರ ಪಾಲಿಕೆ ಕರ್ನಾಟಕದಲ್ಲೇ ಇದ್ದು, ಬೆಳಗಾವಿಯನ್ನು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಠರಾವು ಪಾಸ್ ಮಾಡಲು ಕಾನೂನಿನ ದೃಷ್ಟಿಯಿಂದ ಯಾವುದೇ ತೊಡಕಿಲ್ಲ ಎಂದು ಸುಪ್ರೀಂಕೋರ್ಟಿನ ಹಿರಿಯ ನ್ಯಾಯವಾದಿಗಳಾದ ಮೋಹನ್ ಕಾತರಕಿ ಅವರು ಹೇಳಿದರು.

ಇಂದು ಬೆಳಗಾವಿಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಬೆಳಗಾವಿಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳುವ ನಿರ್ಧಾರವನ್ನು ಸಂಸತ್ತು ಕೈಗೊಂಡಿದೆ.

ಬೆಳಗಾವಿ ಮಹಾನಗರ ಪಾಲಿಕೆ ಕರ್ನಾಟಕದಲ್ಲೇ ಇದ್ದು, ಬೆಳಗಾವಿಯನ್ನು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಠರಾವು ಪಾಸ್ ಮಾಡಲು ಕಾನೂನಿನ ದೃಷ್ಟಿಯಿಂದ ಯಾವುದೇ ತೊಡಕಿಲ್ಲ.

ಮಹಾನಗರ ಪಾಲಿಕೆಯೂ ಭಾರತೀಯ ಮುನ್ಸಿಪಲ್ ಕಾನೂನಿನ ಅಡಿಯಲ್ಲೇ ಕಾರ್ಯನಿರ್ವಹಿಸುತ್ತಿದೆ. ಠರಾವು ಪಾಸ್ ಮಾಡುವುದನ್ನು ಮಹಾಪಾಲಿಕೆಯೂ ತಪ್ಪೆಂದು ತಿಳಿದುಕೊಳ್ಳಬಾರದು. ಗಡಿ ವಿವಾದವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ರಾಜ್ಯ ಸರ್ಕಾರ ತನ್ನ ಪಕ್ಷವನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಮಂಡಿಸುತ್ತಿದೆ. ಅಹಿಂಸಾ ಮಾರ್ಗವಾಗಿ ಕನ್ನಡ ಸಂಘಗಳು ಹೇರುವ ಒತ್ತಡಗಳ ಪರಿಣಾಮ ಸರ್ಕಾರದ ಮೇಲಿರಲಿದೆ.

ಸದಾ ಜನಪ್ರತಿನಿಧಿಗಳ ಗಮನಕ್ಕೆ ತರುವ ಕೆಲಸವನ್ನು ಮಾಡಬೇಕಿದೆ. ಸಮಯ ಬಂದಾಗ ರಾಜ್ಯದ ವಿಭಜನೆಯಾಗಬಹುದು. ಭಾಷಿಕ ಅಲ್ಪಸಂಖ್ಯಾತ ದೃಷ್ಟಿಯಿಂದ ವಿಭಾಗಿಸಬಹುದು. ಆದರೆ, ಬೆಳಗಾವಿ ಕನ್ನಡಿಗರ ಭೂಮಿ. ಇದು ಬೆಳಗಾವಿಯಲ್ಲಿಯೇ ಉಳಿಯಬೇಕು ಎಂದರು.

ಬೆಳಗಾವಿಯಲ್ಲಿ ಮೊದಲು ಕನ್ನಡ ಮರಾಠಿಗರ ಸಂಖ್ಯೆ ಸಮಾನವಾಗಿತ್ತು. ಮಹಾಪಾಲಿಕೆಯಲ್ಲಿ ಠರಾವು ಮಂಜೂರು ಮಾಡಿದರೂ ಯಾವುದೇ ವ್ಯತ್ಯಾಸವಾಗಲ್ಲ. ಮಹಾನಗರ ಪಾಲಿಕೆಗೆ ಸರ್ಕಾರದ ಕಾನೂನಿನ ಸಲಹೆಯನ್ನು ಪಡೆಯಬೇಕು.

ಇನ್ನು ಠರಾವು ಪಾಸ್ ಮಾಡುವುದನ್ನು ರಾಜಕೀಯವಾಗಿ ತಿರ್ಮಾನಿಸುವುದು. ಠರಾವು ಪಾಸ್ ಮಾಡುವುದರಿಂದ ಜನರಲ್ಲಿ ಜಾಗೃತಿ ಮೂಡಲಿದೆ. ಮರಾಠಿಗರ ಸಂಖ್ಯಾಬಲ ಇದ್ದಾಗ ಅವರು ಮರಾಠಿಗರ ಪರ ಪಾಸ್ ಮಾಡಿರುವ ಠರಾವನ್ನು ರದ್ದುಗೊಳಿಸಲು ಇದು ಪೂರಕವಾಗಿದೆ ಎಂದರು.

ಕಾನೂನಾತ್ಮಕವಾಗಿ ಬೆಳಗಾವಿಯನ್ನು ಕರ್ನಾಟಕಕ್ಕೆ ಸೇರ್ಪಡಿಸುವುದನ್ನು ಪ್ರಶ್ನಿಸುವುದು ತಪ್ಪು. ಮಹಾನಗರ ಪಾಲಿಕೆ ಕರ್ನಾಟಕ ಸರ್ಕಾರದ ಆಧೀನದಲ್ಲಿದ್ದು, ಹೀಗಿರುವಾಗ ಕರ್ನಾಟಕ ಸರ್ಕಾರದ ವಿರುದ್ಧ ಠರಾವು ಪಾಸ್ ಮಾಡಿದ್ದು ತಪ್ಪು. ಈ ಹಿನ್ನೆಲೆ ಕಳೆದ ಬಾರಿ ಮಹಾನಗರ ಪಾಲಿಕೆಯನ್ನು ವಿಸರ್ಜಿಸಲಾಗಿತ್ತು. ಕರ್ನಾಟಕದ ಪರ ಠರಾವು ಪಾಸ್’ನಿಂದ ಯಾವುದೇ ತರಹದ ಪರಿಣಾಮ ಬೆಳಗಾವಿಗೆ ಆಗಲ್ಲ ಎಂದರು. ಬೈಟ್

ಇನ್ನು ಬೆಳಗಾವಿ ದೊಡ್ಡ ಜಿಲ್ಲೆಯಾಗಿದೆ. ರಾಜ್ಯ ಕೂಡ ದೊಡ್ಡದಾಗಿದೆ. ಅಭಿವೃದ್ಧಿಯ ಹಿತದೃಷ್ಟಿಯಿಂದ ವಿಂಗಡಣೆ ಮಾಡಿದರೇ, ಒಳ್ಳೆಯದು. ಸಂಪೂರ್ಣ ರಾಜ್ಯದಲ್ಲಿ ಆಡಳಿತದ ಸಮಸ್ಯೆಯಿದೆ. ನೀರಾವರಿ ಸಮಸ್ಯೆ ಎಲ್ಲೆಡೆ ಇದೆ. ದಕ್ಷಿಣ ಕರ್ನಾಟಕದವರು ಕಾವೇರಿ ಮತ್ತು ಉತ್ತರ ಕರ್ನಾಟಕದವರು ಕೃಷ್ಣಾ ಯೋಜನೆಗಳು ಹಲವಾರು ವರ್ಷಗಳಿಂದ ಬಾಕಿಯಿದೆ. ನ್ಯಾಯಾಲಯದಲ್ಲಿ ಇನ್ನು ವ್ಯಾಜ್ಯವಿದೆ. ರಾಜ್ಯದ 2 ವಿಭಾಗದಲ್ಲಿಯೂ ಅಸಮಾಧಾನವಿದೆ. ಅಭಿವೃದ್ಧಿಯ ದೃಷ್ಟಿಯಿಂದ ವಿಂಗಡನೆಯ ವಿಚಾರ ಉತ್ತಮವಾಗಿದೆ ಎಂದರು. ಬೈಟ್

ಇನ್ನು ಗಡಿವಿವಾದ ವಿಚಾರಣೆ ಇನ್ನು ನ್ಯಾಯಾಲಯದಲ್ಲಿ ಬಾಕಿಯಿದೆ. ಮೆಂಟೆನ್ ಅಂತ ನ್ಯಾಯಾಲಯವು ಹೇಳಿದರೇ, ಮುಂದೆ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಾರೆ. ನಂತರ ವಿಚಾರಣೆ ನಡೆಸಲಾಗುತ್ತದೆ ಎಂದರು.

Edited By :
PublicNext

PublicNext

17/06/2026 08:08 pm

Cinque Terre

13.48 K

Cinque Terre

0

ಸಂಬಂಧಿತ ಸುದ್ದಿ