ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಅಪ್ರಾಪ್ತ ಚಾಲಕನಿಂದ ಅಪಘಾತ - ಪೋಷಕರ ವಿರುದ್ಧ ಪ್ರಕರಣ ದಾಖಲು.!

ಮಣಿಪಾಲ: ಪರ್ಕಳ ನೇತಾಜಿ ನಗರ ಎಂಬಲ್ಲಿ ಅಪ್ರಾಪ್ತ ಬಾಲಕನೋರ್ವ ಚಲಾಯಿಸುತ್ತಿದ್ದ ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದು, ಈ ಸಂಬಂಧ ಬಾಲಕ ಹಾಗೂ ಆತನ ಪೋಷಕರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇತಾಜಿ ನಗರ ಕಡೆಯಿಂದ ಪ್ರಗತಿ ನಗರದ ಕಡೆಗೆ ಬಡಗುಬೆಟ್ಟು ಗ್ರಾಮದ ಮಹಮ್ಮದ್ ಸೈಫ್(17) ಎಂಬಾತ ಚಲಾಯಿಸಿಕೊಂಡು ಬರುತ್ತಿದ್ದ ಕಾರು, ಮನೆಯ ಹೊರಗಡೆ ರಸ್ತೆ ಬದಿ ನಿಲ್ಲಿಸಿದ ಸ್ಕೂಟರ್‌ಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಸ್ಕೂಟರ್ ಮನೆಯ ಕಂಪೌಂಡಿಗೆ ತಾಗಿ ಬಿದ್ದಿತ್ತು. ಇದರಿಂದ ಸ್ಕೂಟರ್ ರಸ್ತೆಗೆ ಬಿದ್ದು ಜಖಂಗೊಂಡಿದೆ.

ಕಾರು ಚಾಲಕ ಮಹಮ್ಮದ್ ಸೈಫ್ ಹಾಗೂ ಅಪ್ರಾಪ್ತ ಬಾಲಕನಿಗೆ ಕಾರನ್ನು ಚಲಾಯಿಸಲು ನೀಡಿದ ಕಾರಿನ ಮಾಲಕ ಸಲೀಂ ಎಂಬವರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

18/06/2026 10:48 am

Cinque Terre

1.42 K

Cinque Terre

0

ಸಂಬಂಧಿತ ಸುದ್ದಿ