ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕ್ರೆಡಿಟ್ ಕಾರ್ಡ್ ಅಪ್‌ ಗ್ರೇಡ್ ಹೆಸರಿನಲ್ಲಿ 3.05 ಲಕ್ಷ ರೂ. ವಂಚನೆ

ಮುಲ್ಕಿ: ಕ್ರೆಡಿಟ್ ಕಾರ್ಡ್ ಅಪ್‌ಗ್ರೇಡ್ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 3.05 ಲಕ್ಷ ರೂ.ಗೂ ಅಧಿಕ ಹಣ ವಂಚಿಸಿರುವ ಘಟನೆ ನಡೆದಿದೆ.

ಮುಲ್ಕಿಯ 45 ವರ್ಷದ ವ್ಯಕ್ತಿಯೊಬ್ಬರು ಮುಂಬಯಿಯಲ್ಲಿ ವಾಸವಿದ್ದು, ಜೂ. 17ರಂದು ತಮ್ಮ. ತಾಯಿ ಮನೆಯಾದ ಕರ್ನೀರೆ ಗೆ ಬಂದಿದ್ದರು. ಅಂದು ಸಂಜೆ ಅವರ ಮೊಬೈಲ್‌ಗೆ ಅನ್ಯ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತಾನು ಇಂಡಸ್ ಇಂಡ್ ಬ್ಯಾಂಕ್ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದಾನೆ. ಜೀವಿತಾವಧಿಯ ಕ್ರೆಡಿಟ್ ಕಾರ್ಡ್ ಸೌಲಭ್ಯಅಪ್‌ಗ್ರೇಡ್ ಮಾಡಿಕೊಡುವುದಾಗಿ ತಿಳಿಸಿದ ಆರೋಪಿ, ಇವರ ಒಪ್ಪಿಗೆ ಪಡೆದ ಬಳಿಕ ವಾಟ್ಸಾಪ್ ಅಪ್‌ಗ್ರೇಡ್ ಸೌಲಭ್ಯ ನೀಡುವುದಾಗಿ ಮೂಲಕ ಲಿಂಕ್ ಕಳುಹಿಸಿದ್ದಾನೆ. ಲಿಂಕ್ ತೆರೆಯುತ್ತಿದ್ದಂತೆ ವೆಬ್ ಸೈಟ್ ತೆರೆದಿದ್ದು, ಅದರಲ್ಲಿ ಕ್ರೆಡಿಟ್ ಕಾರ್ಡ್ ವಿವರಗಳು ಹಾಗೂ ಒಟಿಪಿ ನಮೂದಿಸುವಂತೆ ಸೂಚಿಸಲಾಗಿದೆ. ವಿವರಗಳನ್ನು ನಮೂದಿಸಿದ ಕೆಲವೇ ಸಮಯದಲ್ಲಿಅವರ ಇಂಡಸ್‌ ಇಂಡ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ ಹಂತ ಹಂತವಾಗಿ ಒಟ್ಟು 3,05,165 ರೂ. ಹಣ ಕಡಿತಗೊಂಡಿದೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

20/06/2026 11:18 am

Cinque Terre

304

Cinque Terre

0

ಸಂಬಂಧಿತ ಸುದ್ದಿ