ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಉದ್ಯಮಿಗೆ ಹನಿಟ್ರ್ಯಾಪ್ ಪ್ರಕರಣ - ಆರೋಪಿಗಳಿಗೆ ಜಾಮೀನು ಮಂಜೂರು

ಮಂಗಳೂರು: ಹೆಸರಾಂತ ಉದ್ಯಮಿಯೊಬ್ಬರಿಗೆ ಸಲಿಂಗಕಾಮಕ್ಕೆ ಸಂಬಂಧಿಸಿದ ವಿಡಿಯೊ ತೋರಿಸಿ ಬ್ಲಾಕ್‌ಮೇಲ್ ಮಾಡಿ ₹2.77 ಕೋಟಿ ಹಣ ವಸೂಲಿ ಮಾಡಿದ ಆರೋಪ ಎದುರಿಸುತ್ತಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಈ ಪ್ರಕರಣದಲ್ಲಿ ಉದ್ಯಮಿಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನಿಜಾಮ್ ಹಾಗೂ ಜಿತೇಶ್ ವಿರುದ್ಧ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉದ್ಯಮಿ ನೀಡಿದ ದೂರಿನನ್ವಯ ಪೊಲೀಸರು ನಿಜಾಮ್ @ ಇಬ್ರಾಹಿಂ ಹಾಗೂ ಜಿತೇಶ್‌ ಅವರನ್ನು ಬಂಧಿಸಿ, ಮಾನ್ಯ ಪ್ರಧಾನ ಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಪ್ರಸ್ತುತ, ಆರೋಪಿಗಳ ಪರವಾಗಿ ಮಂಡಿಸಲಾದ ವಾದಗಳನ್ನು ಪರಿಗಣಿಸಿದ ಮಾನ್ಯ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Edited By : Abhishek Kamoji
Kshetra Samachara

Kshetra Samachara

18/06/2026 07:11 pm

Cinque Terre

822

Cinque Terre

0

ಸಂಬಂಧಿತ ಸುದ್ದಿ