ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ್ದ 'ಲವ್ ಮಾಕ್‌ಟೇಲ್' ಸರಣಿಯ ಕೊನೆಯ ಭಾಗ 'ಲವ್ ಮಾಕ್‌ಟೇಲ್ 3' ಈಗ ಕಿರುತೆರೆಯಲ್ಲಿ ಧೂಳಬ್ಬಿಸಲು ಸಜ್ಜಾಗಿದೆ. ಜೀ ಕನ್ನಡ ವಾಹಿನಿಯು ಈ ಸೂಪರ್ ಹಿಟ್ ಚಿತ್ರದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಅನ್ನು ನಿಮ್ಮ ಮುಂದೆ ತರುತ್ತಿದೆ.
ಪ್ರತಿ ಬಾರಿಯೂ ವೀಕ್ಷಕರಿಗೆ ವಿಭಿನ್ನ ಹಾಗೂ ಮನಮುಟ್ಟುವ ಕಥೆಗಳನ್ನು ನೀಡುತ್ತಾ ಬಂದಿರುವ ಜೀ ಕನ್ನಡ, ಈ ವಾರಾಂತ್ಯದ ಸಿನಿಮಾ ಮನರಂಜನೆಯನ್ನು ಮತ್ತಷ್ಟು ರಂಗೇರಿಸಲು ಸಜ್ಜಾಗಿದೆ. ಬಹುನಿರೀಕ್ಷಿತ 'ಲವ್ ಮಾಕ್‌ಟೇಲ್ 3' ಚಿತ್ರವು ಇದೇ ಜೂನ್ 21ರ ಭಾನುವಾರ ಸಂಜೆ 4:30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರುವ ಈ ಚಿತ್ರದಲ್ಲಿ ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್, ಸಂವೃತಾ ಸುನಿಲ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಈ ಬಾರಿ ಚಿತ್ರದಲ್ಲಿ ಕೇವಲ ಪ್ರೀತಿ ಮಾತ್ರವಲ್ಲದೆ, ತಂದೆಯ ಹಂಬಲ, ಕೌಟುಂಬಿಕ ಮೌಲ್ಯಗಳು ಹಾಗೂ ರಕ್ತಸಂಬಂಧಕ್ಕಿಂತ ಮಿಗಿಲಾದ ಭಾವನಾತ್ಮಕ ಒಡನಾಟವನ್ನು ಅದ್ಭುತವಾಗಿ ತೋರಿಸಲಾಗಿದೆ.
ಟ್ವಿಸ್ಟ್ ಏನು?
ಚಿತ್ರದ ಕಥಾನಾಯಕ ಆದಿ (ಡಾರ್ಲಿಂಗ್ ಕೃಷ್ಣ), ತಾನು ದತ್ತು ಪಡೆದ ಮಗಳು ನಿಧಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಸಾಕಿರುತ್ತಾನೆ. ಆದರೆ ಇವರ ಸುಂದರ ಬದುಕಿಗೆ ಡಾ. ಶಾಂತಾ ಅವರ ಪ್ರವೇಶವಾಗುತ್ತದೆ. ನಿಧಿ ತನ್ನ ಸ್ವಂತ ಮೊಮ್ಮಗಳು ಎಂದು ಅವರು ಕಾನೂನು ಹೋರಾಟಕ್ಕೆ ಇಳಿದಾಗ, ಅಪ್ಪ-ಮಗಳ ಬಾಂಧವ್ಯದ ನಡುವೆ ದೊಡ್ಡ ಸಂಘರ್ಷವೇ ಶುರುವಾಗುತ್ತದೆ.ಕೊನೆಗೆ ಆದಿ ತನ್ನ ಮಗಳನ್ನು ಉಳಿಸಿಕೊಳ್ಳುತ್ತಾನಾ? ಈ ಭಾವನಾತ್ಮಕ ಹೋರಾಟ ಎತ್ತ ಸಾಗುತ್ತದೆ ಎಂಬುದೇ ಚಿತ್ರದ ಕ್ಲೈಮ್ಯಾಕ್ಸ್. ಈ ಎಮೋಷನಲ್ ಫ್ಯಾಮಿಲಿ ಡ್ರಾಮಾವನ್ನು ಮಿಸ್ ಮಾಡದೇ ವೀಕ್ಷಿಸಿ.
PublicNext
18/06/2026 01:27 pm