ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಯುವಕರ ಜಗಳ ಬಿಡಿಸಲು ಹೋದ ಪೊಲೀಸ್ ಕಾನ್ಸ್‌ಟೇಬಲ್ ಮೇಲೆಯೇ ಹಲ್ಲೆ

ಬೆಳಗಾವಿ: ಡಿಸಿ ಕಚೇರಿ ಬಳಿ ನಡೆಯುತ್ತಿದ್ದ ಯುವಕರ ಜಗಳ ಬಿಡಿಸಲು ಹೋದ ಪೊಲೀಸ್ ಕಾನ್ಸ್‌ಟೇಬಲ್ ಮೇಲೆಯೇ ಪುಂಡ ಯುವಕ ಹಲ್ಲೆ ಮಾಡಿ ಗೂಂಡಾಗಿರಿ ತೋರಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗಲಾಟೆ ಮಾಡಿಕೊಳ್ತಿದ್ದ ಯುವಕರ ಗುಂಪಿನ ಜಗಳ ಬಿಡಿಸಲು ಹೋಗಿದ್ದ ಮಾರ್ಕೆಟ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಮಲ್ಲಿಕಾರ್ಜುನ ಗುಂಜಿಕರ್ ಮೇಲೆ ಹಲ್ಲೆ ನಡೆಸಲಾಗಿದೆ.‌ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮಾರ್ಕೆಟ್ ಠಾಣೆ ಪಿಐ ಎರಡು ಗ್ಯಾಂಗ್‌ನ ಯುವಕರನ್ನು ವಶಕ್ಕೆ ಪಡೆದು ನಡುರಸ್ತೆಯಲ್ಲೇ ಕಿಡಿಗೇಡಿಗಳಿಗೆ ಕಪಾಳಮೋಕ್ಷ ಮಾಡಿ ಠಾಣೆಗೆ ಕರೆದುಕೊಂಡು ಹೋಗಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Edited By : Vinayak Patil
PublicNext

PublicNext

18/06/2026 06:12 pm

Cinque Terre

18.02 K

Cinque Terre

0

ಸಂಬಂಧಿತ ಸುದ್ದಿ