ಬ್ರಹ್ಮಾವರ: ಪಂಜರದಲ್ಲಿ ಪಕ್ಷಿಗಳನ್ನು ಬಂಧಿಸಿ ಆಹಾರ ನೀಡುವ ಒಂದು ವರ್ಗವಾದರೆ ಸ್ವಚ್ಛಂದವಾಗಿ ವಿಹರಿಸುವ ಪಕ್ಷಿಗಳಿಗೆ ಕೊರೊನಾ ಸಮಯದಿಂದ ಪ್ರತಿದಿನ ಬೆಳಿಗ್ಗೆ ಪಕ್ಷಿಗಳಿಗೆ ಆಹಾರ ನೀಡುತ್ತಿದ್ದಾರೆ ಬ್ರಹ್ಮಾವರ ಬಸ್ ನಿಲ್ದಾಣದ ಬಳಿಯಲ್ಲಿ 5 ಮಂದಿಯ ಒಂದು ತಂಡ.
ನಿವೃತ್ತ ಬ್ಯಾಂಕ್ ಉದ್ಯೋಗಿ ವಿದ್ಯಾಧರ ಶೆಟ್ಟಿ. ಹಾಲಿನ ಅಂಗಡಿಯ ನಿತ್ಯಾನಂದ, ಕಾರ್ಮಿಕ ಜಯರಾಂ, ಹೂವಿನ ಅಂಗಡಿಯ ಗಣೇಶ, ಅಂಚೆ ಇಲಾಖೆಯ ಗಣೇಶ ಇವರು ಬೆಳಿಗ್ಗೆ ಆರು ಕಾಲು ಗಂಟೆಗೆ ಬಸ್ ನಿಲ್ದಾಣದ ಬಳಿ ಶೇವಿಗೆ ಕಾಳುಗಳು, ಧಾನ್ಯಗಳನ್ನು ಹಾಕುವಾಗ ನೂರಾರು ಕಾಗೆಗಳು ಪಾರಿವಾಳಗಳು ಪ್ರತಿದಿನ ಕಾದು ಕುಳಿತು ಬಂದು ಒಂದಾಗಿ ತಮ್ಮ ಆಹಾರವನ್ನು ಪಡೆದು ಮತ್ತೆ ಹೋಗುತ್ತವೆ.
ಕನಿಷ್ಠ ಪ್ರತಿ ದಿನ 100 ರೂ.ನಷ್ಟು ಖರ್ಚು ಮಾಡಿ ಪಕ್ಷಿ ಸಂಕುಲದ ಉಳಿವಿಗೆ ನೆರವಾಗುತ್ತಿದ್ದು ಪ್ರಚಾರಕ್ಕಾಗಿ ಒಂದು ದಿನ ಮಾಡದೆ ಪ್ರತಿ ದಿನವೂ ಮಾಡುತ್ತ ನೈಜ ಸೇವೆಯಿಂದ ಮಾದರಿಯಾಗಿದ್ದಾರೆ.
Kshetra Samachara
19/06/2026 11:25 am
LOADING...