ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಗಾಯಗೊಂಡ ಮುಳ್ಳುಹಂದಿ ಅರಣ್ಯ ಇಲಾಖೆಗೆ ಹಸ್ತಾಂತರ

ಉಡುಪಿ: ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಗಾಯಾಳಾಗಿದ್ದ ಮುಳ್ಳುಹಂದಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಫಾರೆಸ್ಟರ್ ಶಿವಾನಂದ ಮುಳ್ಳುಹಂದಿಯನ್ನು ಸ್ವೀಕರಿಸಿದ್ದು, ಚಿಕಿತ್ಸೆ ಒದಗಿಸಿ, ಗುಣಮುಖವಾದ ಬಳಿಕ ಕಾಡಿಗೆ ಬಿಡುವುದಾಗಿ ಹೇಳಿದ್ದಾರೆ.

ಚಿತ್ಪಾಡಿಯ ಶ್ರೀನಿವಾಸ ನಗರದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಮುಳ್ಳುಹಂದಿಯನ್ನು ಗಮನಿಸಿದ ಧನಂಜಯ ದೇವಾಡಿಗ ಎಂಬುವರು ಒಳಕಾಡು ಅವರ ಗಮನಕ್ಕೆ ತಂದಿದ್ದರು. ತಕ್ಷಣ ಸ್ಪಂದಿಸಿದ ಅವರು ಚಾಣಾಕ್ಷತನದಿಂದ ಗೋಣಿ ಚೀಲ ಬಳಸಿಕೊಂಡು, ಕಾರ್ಯಾಚರಣೆ ನಡೆಸಿ ಗಾಯಾಳು ಮುಳ್ಳುಹಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಕಾದಾಟದಲ್ಲಿ ಮೈತುಂಬ ಮುಳ್ಳುಹಂದಿಯ ಮುಳ್ಳುಗಳನ್ನು ಬಹಳವಾಗಿ ಚುಚ್ಚಿಸಿಕೊಂಡಿರುವ ನಾಯಿ ನಾಪತ್ತೆಯಾಗಿದೆ. ಅಪಾಯದ ಸ್ಥಿತಿಯಲ್ಲಿರುವ‌ ನಾಯಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆ ಇದೆ.

Edited By : Manjunath H D
PublicNext

PublicNext

20/06/2026 07:37 pm

Cinque Terre

5.86 K

Cinque Terre

0

ಸಂಬಂಧಿತ ಸುದ್ದಿ