ಹುಕ್ಕೇರಿ : ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ಪ್ರತಿ 11 ವರ್ಷಕ್ಕೊಮ್ಮೆ ಜರುಗುವ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರೆಯು ಬರುವ 2027ರಲ್ಲಿ ಜರುಗಲಿದ್ದು ಅದರ ಅಂಗವಾಗಿ ಕೋಣ ಬಿಡುವ ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಜಾತ್ರೆಯ ಹಕ್ಕುದಾರರಾದ ಸಂತೋಷ ಹವಾಲ್ದಾರ್ ಮನೆಯಲ್ಲಿ ಕೋಣಿನ ಪೂಜೆಯ ನಂತರ ಬುಸಾರ ಲಕ್ಷ್ಮಿ ಮಂದಿರದಿಂದ, ಹಕ್ಕುದಾರರ ಹಾಗೂ ಖಾತೆದಾರ ಗೌಡರ ಮನೆಯಿಂದ ಶ್ರೀ ಶಂಕರಲಿಂಗ ದೇವಸ್ಥಾನದಿಂದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ಜಾತ್ರಾ ಕಮಿಟಿಯವರು ಕೋಣಕ್ಕೆ ಪೂಜೆ ನೆರವೇರಿಸಿದರು.
ನಂತರ ಜಾತ್ರೆಯ ಸೂತ್ರಧಾರಿಯಾದ ದೀಲಿಪ ಅಸೂದೆ ಅವರಿಂದ ಚೌಕಾ ಹೊಯ್ದು ಮತ್ತು ಗಾಯರಾಣಿ ಹಾಕಿ ಕೋಣಿಗೆ ಪೂಜೆ ಸಲ್ಲಿಸಿ ಪಟ್ಟಾಭಿಷೇಕ ಮಾಡಿದ ನಂತರ ಕೋಣವನ್ನ ಬಿಡಲಾಯಿತು.
PublicNext
21/07/2026 05:15 pm
LOADING...