ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: 60 ರಿಂದ 99 ವರ್ಷಗಳ ಸ್ನೇಹದ ಬಂಧ ಮತ್ತೆ ಗಟ್ಟಿಗೊಳಿಸಿದ ಉಗಾರ ಬುದ್ರುಕ್ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ

ಅಥಣಿ: ಕಾಗವಾಡ ತಾಲೂಕಿನ ಉಗಾರ ಬುದ್ರುಕ್ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ 1966 ರಿಂದ 1972 ರವರೆಗೆ ಓದಿದ ಹಿರಿಯ ವಿದ್ಯಾರ್ಥಿಗಳ ಅಪೂರ್ವ ಸ್ನೇಹ ಸಮ್ಮಿಲನ–2026 ಭಾನುವಾರ ವಿಜೃಂಭಣೆಯಿಂದ ಜರುಗಿತು. "ವಯಸ್ಸು ಬರೀ ಸಂಖ್ಯೆ, ಹುಮ್ಮಸ್ಸಿಗ್ಯಾವ ಅಂಕೆ?" ಎಂಬ ಘೋಷವಾಕ್ಯದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ದಶಕಗಳ ಬಳಿಕ ಸ್ನೇಹಿತರೆಲ್ಲ ಒಂದಾಗಿ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.

ಹಿರಿಯರಿಗೆ ಸಾಂಪ್ರದಾಯಿಕ ಟಾವೆಲ್ ಹಾಗೂ ಗಾಂಧಿ ಟೋಪಿ ಧರಿಸಿ ವಾದ್ಯಗೋಷ್ಠಿಯೊಂದಿಗೆ ಪದ್ಮಾವತಿ ವೃತ್ತ ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಗೌರವಿಸಿ ಸನ್ಮಾನಿಸಲಾಯಿತು. ಹಳೆಯ ನೆನಪುಗಳು, ಶಿಕ್ಷಕರ ಮಾರ್ಗದರ್ಶನ ಮತ್ತು ಶಾಲೆಯ ಪಾತ್ರವನ್ನು ಸ್ಮರಿಸಿ ಹಿರಿಯರು ಭಾವುಕರಾದರು. ಹಳೆಯ ಜೀವನಶೈಲಿ ಬಿಂಬಿಸುವ ವಿಡಿಯೊ ಪ್ರದರ್ಶನ ಹಾಗೂ ಸಿಹಿ ಸ್ನೇಹಭೋಜನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಪ್ರತಿಯೊಬ್ಬರಿಗೂ ಗಿಡದ ಸಸಿಗಳನ್ನು ವಿತರಿಸಿ ಪರಿಸರ ಕಾಳಜಿ ಮೆರೆಯಲಾಯಿತು.

ಮಾಜಿ ಶಾಸಕ ಮೋಹನ್ ಶಹಾ, ನಿವೃತ್ತ ನೌಕರರು, ವ್ಯಾಪಾರಿಗಳು, ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದ ಈ ಸುಂದರ ಕಾರ್ಯಕ್ರಮವನ್ನು 'ಉಗಾರ ಬುದ್ರುಕ್ ಗೆಳೆಯರ ಬಳಗ'ದ ಸದಸ್ಯರು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ್ದರು. ಈಶ್ವರ ಪಟಗಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Edited By : PublicNext Desk
PublicNext

PublicNext

27/07/2026 09:05 am

Cinque Terre

3.61 K

Cinque Terre

0

ಸಂಬಂಧಿತ ಸುದ್ದಿ