ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಸಭಾಪತಿ ಸ್ಥಾನಕ್ಕೆ ನೈತಿಕತೆ ಮುಖ್ಯ - ಹೊರಟ್ಟಿ ರಾಜೀನಾಮೆಗೆ ಎಂಎಲ್‌ಸಿ ನಾಗರಾಜ್ ಯಾದವ್ ಆಗ್ರಹ

ಬೆಳಗಾವಿ : ಬಹುಮತ ಕಳೆದುಕೊಂಡ ಬಳಿಕ ನೈತಿಕತೆಯ ಆಧಾರದ ಮೇಲೆ ಹೊರಟ್ಟಿಯವರು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು ಎಂದು ಎಂಎಲ್‌ಸಿ ನಾಗರಾಜ್ ಯಾದವ್ ತಿಳಿಸಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಬಸವರಾಜ ಹೊರಟ್ಟಿ ಅವರು ಪಕ್ಷದಿಂದ ಗೆದ್ದವರು, ಹುದ್ದೆ ಬಿಟ್ಟು ಹೋಗಬೇಕು. ಸಭಾಪತಿ ಸ್ಥಾನದಲ್ಲಿ ಕುಳಿತು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತೀರಿ, ಪಕ್ಷಪಾತ ಮಾಡುತ್ತೀರಿ. ಸಭಾಪತಿ ಸ್ಥಾನಕ್ಕೆ ನೈತಿಕತೆ ಮುಖ್ಯವಾಗಬೇಕು. ಸಿಎಂ, ಡಿಕೆಶಿಯವರು ವಿನಯಪೂರ್ವಕವಾಗಿ ಕೇಳಿಕೊಂಡಿದ್ದಾರೆ; ಪಕ್ಷ ಬಹುಮತದಲ್ಲಿದೆ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ. ಆದರೆ ನೀವು ವಿರೋಧ ಪಕ್ಷದವರ ಮಾತು ಕೇಳಿ ರಾಜೀನಾಮೆ ನೀಡುವುದಾಗಿ ಹೇಳುತ್ತೀರಿ.

ಸಭಾಪತಿ ಪೀಠಕ್ಕೆ ಗೌರವವಿದೆ, ಆದರೆ ಪಕ್ಷಪಾತವನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಹೊರಟ್ಟಿ ರಾಜೀನಾಮೆ ಕೊಡಬೇಕು. ಸ್ಪೀಕರ್ ಕಿತ್ತುಹಾಕುವ ಮಟ್ಟಕ್ಕೆ ನಾವು ಹೋಗುವುದಿಲ್ಲ. ಸದನ ಆರಂಭವಾದ ಬಳಿಕ ಮುಂದಿನ ತೀರ್ಮಾನ ಮಾಡುತ್ತೇವೆ" ಎಂದು ನಾಗರಾಜ್ ಯಾದವ್ ತಿಳಿಸಿದರು.

Edited By : Vinayak Patil
PublicNext

PublicNext

05/08/2026 05:13 pm

Cinque Terre

4.97 K

Cinque Terre

0

ಸಂಬಂಧಿತ ಸುದ್ದಿ